ಅಪ್ಪು ಅಭಿಮಾನಿಗಳು ಅಪ್ಸೆಟ್ !?

www.karnatakatv.net ಪುನೀತ್ ರಾಜ್‌ಕುಮಾರ್ ದೊಡ್ಮನೆಯ ರಾಜರತ್ನ, ಕೋಟ್ಯಾಂತರ ಅಭಿಮಾನಿಗಳ ಪಾಲಿನ ಆರಾಧ್ಯದೈವ. ಅಪ್ಪಾಜಿಯಂತೆ ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಿರುವ ಯುವರತ್ನ. ಬಿಗ್‌ಸ್ಕ್ರೀನ್ ನಲ್ಲಿ ಅಣ್ಣಬಾಂಡ್ ಆಗಿ ಮೆರೆಯುತ್ತಿರುವ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು ಬೆಳೆಸುತ್ತಿರುವ ಅಪ್ಪು ಹಲವರ ಪಾಲಿಗೆ ಆರಾಧ್ಯದೈವವಾಗಿದ್ದಾರೆ. ಸದ್ಯ ಜೇಮ್ಸ್ ಚಿತ್ರದ ಮೂಲಕ ಹವಾ ಎಬ್ಬಿಸೋಕೆ ಹೊರಟಿದ್ದಾರೆ. ಈ ಮಧ್ಯೆ ಅಣ್ಣಬಾಂಡ್ ನಟನೆಯ ಹೊಸ ಸಿನಿಮಾ ಅನೌನ್ಸ್ ಆಗಿದೆ. ಆದರೆ, ಶೀರ್ಷಿಕೆ ಹೊರಬಿದ್ದ ಕ್ಷಣವೇ ಅಪ್ಪು ಅಭಿಮಾನಿ ಬಳಗದ ಕೆಲವು ಭಕ್ತರು ಬೇಸರಗೊಂಡಿದ್ದಾರಂತೆ. ಅದಕ್ಕೆ ಕಾರಣ, ಪವರ್ ನಯಾ ಚಿತ್ರದ ಟೈಟಲ್ ಎನ್ನಲಾಗ್ತಿದೆ.

ಪವರ್ ನಟನೆಯ ಪ್ರತಿ ಸಿನಿಮಾಗಳ ಮೇಲೆ ದೊಡ್ಮನೆ ಭಕ್ತರಿಗೆ ವಿಶೇಷವಾದ ಪ್ರೀತಿ ಮತ್ತು ಬೆಟ್ಟದಷ್ಟು ನಿರೀಕ್ಷೆ. ಆ ಪ್ರೀತಿಯನ್ನ ಹಾಗೂ ಆ ನಿರೀಕ್ಷೆಯನ್ನ ಅಷ್ಟೇ ಜತನದಿಂದ ಅಪ್ಪು ಕಾಪಾಡಿಕೊಳ್ಳುತ್ತಾ ಹೋಗ್ತಿದ್ದಾರೆ. ಅಪ್‌ಕೋರ್ಸ್ ಮುಂದೆಯೂ ಕಾಪಾಡಿಕೊಳ್ತಾರೆ. ಸದ್ಯಕ್ಕೆ ಅಪ್ಪು ಅಭಿಮಾನಿ ಬಳಗದ ಕೆಲವರು ಬೇಸರಗೊಂಡಿದ್ದಾರೆ. ಈ ಟೈಟಲ್‌ನ ಯಾಕ್ ಒಪ್ಪಿಕೊಂಡ್ರು ಮತ್ತು ಹೆಂಗೆ ಒಪ್ಪಿಕೊಂಡರು ಅಂತ ಚಿಂತಿಮಾಡುತ್ತಿದ್ದಾರಲ್ಲದೇ, ಟೈಟಲ್‌ನ ಚೇಂಜ್ ಮಾಡುವಂತೆ ಆ ನಿರ್ದೇಶಕರಿಗೆ ಕೈಮುಗಿದು ಮನವಿ ಮಾಡಿಕೊಳ್ತಿದ್ದಾರೆ. ಅಷ್ಟಕ್ಕೂ ಆ ನಿರ್ದೇಶಕರು ಬೇರ್ಯಾರು  ಅಲ್ಲ ಲೂಸಿಯಾ ಖ್ಯಾತಿಯ ಪವನ್ ಕುಮಾರ್

ಪವನ್ ಹಾಗೂ ಪುನೀತ್ ಜುಗಲ್‌ಬಂಧಿಯಲ್ಲಿ ಒಂದು ಸಿನಿಮಾ ತಯ್ಯಾರಾಗಲಿದೆ. ಆ ಚಿತ್ರಕ್ಕೆ ದ್ವಿತ್ವ ಅಂತ ಹೆಸರಿಟ್ಟಿದ್ದಾರೆ. ರಾಘವೇಂದ್ರ ರಾಯರ ದಿನದಂದೇ ಚಿತ್ರದ ಶೀರ್ಷಿಕೆಯನ್ನ ಅನಾವರಣ ಮಾಡಿದ್ದಾರೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು, ವಿಜಯ್ ಕಿರಂಗದೂರ್ ಬಂಡವಾಳ ಹೂಡುತ್ತಿದ್ದಾರೆನ್ನುವ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ. ಹೀಗೆ ದ್ವಿತ್ವ ಹೆಸರಿನ ಟೈಟಲ್ ರಿವೀಲ್ ಆಗಿದ್ದೇ ತಡ ಅಪ್ಪು ಅಭಿಮಾನಿ ಬಳಗದ ಕೆಲವರು ಬೇಸರಗೊಂಡಿದ್ದಾರೆ. ಶೀರ್ಷಿಕೆಯಲ್ಲಿ ಕಿಕ್ ಇಲ್ಲ ಎನ್ನುವ ಕಾರಣಕ್ಕೋ ಅಥವಾ ಟೈಟಲ್ ಕನ್‌ಫ್ಯೂಶನ್ ಕ್ರಿಯೇಟ್ ಮಾಡ್ತಿದ್ದೆ ಎನ್ನುವ ಕಾರಣಕ್ಕೋ ಗೊತ್ತಿಲ್ಲ. ಆದರೆ, ಸಿನಿಮಾ ಟೈಟಲ್‌ನ ಬದಲಾವಣೆ ಮಾಡಿ ಅಂತ ನಿರ್ದೇಶಕ ಪವನ್ ಕುಮಾರ್ ಬಳಿ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಪವನ್ ಟೈಟಲ್‌ನ ಚೇಂಜ್ ಮಾಡ್ತಾರಾ ಇಲ್ಲವಾ ಅನ್ನೋದು ಸದ್ಯದ ಕೂತೂಹಲ .

ತಮ್ಮ ನೆಚ್ಚಿನ ನಟನ ಸಿನಿಮಾದಲ್ಲಿ ಫ್ಯಾನ್ಸ್ ಪವರ್‌ಫುಲ್ ಡೈಲಾಗ್‌ನ ಮಾತ್ರವಲ್ಲ ಪವರ್‌ಫುಲ್ ಕಮ್ ಕ್ಯಾಚಿ ಟೈಟಲ್‌ನ ನಿರೀಕ್ಷೆ ಮಾಡ್ತಾರೆ. ಅಷ್ಟಕ್ಕೂ ದ್ವಿತ್ವ ಅಂದ್ರೇನು ? ಪವರ್‌ಸ್ಟಾರ್ ಅದ್ಯಾಕೆ ಈ ಸಿನಿಮಾನ ಓಕೆ ಮಾಡಿದ್ರು? ಪವನ್ ಅದ್ಯಾಕೆ ದ್ವಿತ್ವ ಅಂತ ಟೈಟಲ್ ಫಿಕ್ಸ್ ಮಾಡಿದ್ರು? ಈ ಯಾವ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ. ಆದರೆ, ಚೂರುಚೂರಾದ ಮುಖವುಳ್ಳ ಪವರ್‌ಪೋಸ್ಟರ್ ಕೂತೂಹಲ ಕೆರಳಿಸುತ್ತಿದೆ. ಸಸ್ಪೆನ್ಸ್- ಥ್ರಿಲ್ಲರ್ ಸಿನಿಮಾಗಳನ್ನು ಕೊಟ್ಟು ಸಿನಿಮಾಪ್ರೇಮಿಗಳನ್ನ ಬೆಚ್ಚಿಬೀಳಿಸಿರುವ ನಿರ್ದೇಶಕ ಪವನ್‌ಕುಮಾರ್, ಮಗದೊಮ್ಮೆ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದ ಮೂಲಕ ಬಿಗ್‌ಸ್ಕಿçÃನ್ ದಂಗುಬಡಿಸೋದಕ್ಕೆ ಸಜ್ಜಾಗಿದ್ದಾರೆ. ಕಮರ್ಷಿಯಲ್ ಗಡಿರೇಖೆಯನ್ನು ದಾಟಿ ಬಂದಿರುವ ದೊಡ್ಮನೆ ಯುವರಾಜ ಯೂಟರ್ನ್ ಡೈರೆಕ್ಟರ್‌ಗೆ ಸಾಥ್ ಕೊಡ್ತಿದ್ದಾರೆ. ಒಟ್ನಲ್ಲಿ ಪುನೀತ್- ಪವನ್ ಕಾಂಬಿನೇಷನ್ ಸಂಚಲನ ಸೃಷ್ಟಿಸಿದೆ. ಟೈಟಲ್‌ನಿಂದಲೇ ಬgಜಾರ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ, ಕರ್ನಾಟಕ ಟಿವಿ

About The Author