Beauty Tips: ವಯಸ್ಸು 35 ದಾಟುತ್ತಿದೆಯಾ..? ಹಾಗಾದ್ರೆ ಈ ರೀತಿ ಇರಲಿ ನಿಮ್ಮ ದಿನಚರಿ

Beauty Tips: ವಯಸ್ಸು 30 ಆದಾಗಲೇ ನಾವು ಅರ್ಧ ವಯಸ್ಸಾಗಿ ಹೋಗಿರ್ತೀವಿ. ಆಗಲೇ ನಮಗೆ ಕೈ ಕಾಲು, ಮಂಡಿ ನೋವು ಶುರುವಾಗಿರತ್ತೆ. ಬಿಪಿ, ಶುಗರ್‌ನ ಕೂಡ ನಾವು ವೆಲ್ಕಮ್ ಮಾಡಿರ್ತೀವಿ. ಆದರೆ 30ರಿಂದ 35 ವಯಸ್ಸು ಮೀರುವ ಮುನ್ನ ನಾವು ನಮ್ಮ ಆರೋಗ್ಯ, ಸೌಂದರ್ಯ ಎರಡರ ಬಗ್ಗೆಯೂ ಗಮನ ನೀಡಬೇಕು. ಆಗ ಮಾತ್ರ ನಾವು ಸ್ವಲ್ಪ ಯಂಗ್ ಮತ್ತು ಎನರ್ಜಿಟಿಕ್ ಆಗಿರೋಕ್ಕೆ ಸಾಧ್ಯಾ. ಹಾಗಾದ್ರೆ ಆರೋಗ್ಯ ಚೆನ್ನಾಗಿರಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.

ಬೆಳಿಗ್ಗೆ ಬೇಗ ಎದ್ದು ಕೆಲಸ ಮುಗಿಸಿ, ಸೂರ್ಯನ ತಿಳಿಬಿಸಿಲಲ್ಲಿ ಸ್ವಲ್ಪ ಸಮಯ ಕುಳಿತುಕ“ಳ್ಳಿ. ಇದರಿಂದ ನಿಮ್ಮ ಚರ್ಮಕ್ಕೆ ವಿಟಾಮಿನ್ ಡಿ ಸಿಗುತ್ತದೆ. ಇದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುವುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ತ್ವಚೆ ಆರೋಗ್ಯಕರವಾಗಿರುತ್ತದೆ. ಬೇಗ ನೆರಿಗೆ ಬರುವುದಿಲ್ಲ.

ಇತ್ತೀಚೆಗೆ ಸಣ್ಣ ವಯಸ್ಸಿನಲ್ಲೇ ಬಿಪಿ ಬರುತ್ತಿದೆ. ಅದರಲ್ಲೂ ಲೋ ಬಿಪಿ ಹೆಚ್ಚು. ಹಾಗಾಗಿ ಪದೇ ಪದೇ ನಿಮ್ಮ ಬಿಪಿ ಚೆಕ್ ಮಾಡಿ. ಸಮಸ್ಯೆ ಇದ್ದಲ್ಲಿ, ಪರಿಹಾರ ಕಂಡುಕ“ಳ್ಳಿ. ಏಕೆಂದರೆ ಬಿಪಿ ಸಾಮಾನ್ಯ ಆರೋಗ್ಯ ಸಮಸ್ಯೆ ಎನ್ನಿಸಿದರೂ, ಥಟ್ ಎಂದು ಪ್ರಾಣ ಹೋಗುವ ಅಪಾಯ ಹೆಚ್ಚು.

ಬಿಪಿಯಿಂದ ಹೃದಯಾಘಾತ, ಕಿಡ್ನಿ ಸಮಸ್ಯೆ ಇತ್ಯಾದಿ ಬರುತ್ತದೆ. ಹಾಗಾಗಿ ಬಿಪಿ ಇದ್ದಲ್ಲಿ ಖಂಡಿತವಾಗಿಯೂ ನಿರ್ಲಕ್ಷಿಸಬೇಡಿ. ಇನ್ನು ಮೂಳೆಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ. ದೇಹಕ್ಕೆ ಕ್ಯಾಲ್ಶಿಯಂ ಸಿಗುವ ಆಹಾರವನ್ನು ಹೆಚ್ಚು ಸೇವಿಸಿ. ಕ್ಯಾಲ್ಸಿಯಂ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಮೂಳೆ ಮತ್ತು ಹಲ್ಲು ಗಟ್ಟಿಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜೀರ್ಣವಾಗುವಷ್ಟು ನೀರು ಕುಡಿಯಿರಿ. ವರ್ಷಕ್ಕೆ 1 ಬಾರಿ ಆರೋಗ್ಯ ತಪಾಸಣೆ ಮಾಡಿಸುವುದು ಉತ್ತಮ.

About The Author