ಚಂಡೀಘಡ: ತನ್ನ ಅದೃಷ್ಟ ಪರೀಕ್ಷೆ ಮಾಡೋಕೆ ಅಂತ ಪೊಲೀಸ್ ಪೇದೆ ತೆಗೆದುಕೊಂಡಿದ್ದ ಆ ಒಂದು ಲಾಟರಿ ಚೀಟಿಯಿಂದಾಗಿ ಇವತ್ತು ಆತನ ಅದೃಷ್ಟ ಖುಲಾಯಿಸಿದೆ. ಬರೋಬ್ಬರಿ 2 ಕೋಟಿ ಬಂಪರ್ ಡ್ರಾ ಪಡೆದುಕೊಂಡ ಪೇದೆ ರಾತ್ರೋರಾತ್ರಿ ಕೋಟ್ಯಾಧೀಶ್ವರನಾಗಿದ್ದಾನೆ.
ಪಂಜಾಬ್ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿರುವ 30 ವರ್ಷದ ಅಶೋಕ್ ಕುಮಾರ್ ಪಂಜಾಬ್ ಸರ್ಕಾರದ ನ್ಯೂ ಇಯರ್ ಲೊಹ್ರಿ ಬಂಪರ್ ಡ್ರಾ ದಲ್ಲಿ 2 ಕೋಟಿ ಗೆದ್ದಿರುವ ಅದೃಷ್ಟವಂತ. ಇನ್ನು ಬಂಪರ್ ಡ್ರಾದ ಫಲಿತಾಂಶ ಹೊರಬರುತ್ತಿದ್ದಂತೆ ಪೇದೆ ಅಶೋಕ್ ಕುಮಾರ್ ಗೆ ತಾವು ತೆಗೆದುಕೊಂಡಿದ್ದ ಲಾಟರಿ ಚೀಟಿ ಬಗ್ಗೆ ನೆನಪಾಗಿದೆ. ಆದ್ರೆ ಚೀಟಿಯನ್ನು ಜೋಪಾನ ಮಾಡದೇ ಎಲ್ಲಾ ಇಟ್ಟಿದ್ದರು. ಎಲ್ಲಾ ಕಡೆ ಹುಡುಕಿ ಸುಸ್ತಾದ ಪೇದೆಗೆ ಕೊನೆಗೆ ಪೊಲೀಸ್ ಠಾಣೆ ಡ್ರಾಯರ್ ನಲ್ಲೇ ಲಾಟರಿ ಚೀಟಿ ಸಿಕ್ಕಿದೆ. ನಂತರ ಅವರಿಗೇ ಲಾಟರಿ ಹೊಡೆದಿರೋದು ಖಚಿತವಾಗಿದೆ. ಒಟ್ಟಾರೆ ಅದೃಷ್ಟ ಪರೀಕ್ಷೆಗಿಳಿದು ಪಾಸಾಗಿ 2 ಕೋಟಿಗೆದ್ದಿರೋ ಪೇದೆ ಅಶೋಕ್ ಇದೀಗ ಕುಬೇರನಾಗಿದ್ದಾನೆ.
ಜುಲೈ 5ಕ್ಕೆ ಕೇಂದ್ರ ಬಜೆಟ್..!! ತಜ್ಞರೊಂದಿಗೆ ಮೋದಿ ಚರ್ಚೆ ಮಾಡಿದ್ದೇನು ಗೊತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ