ಮುಂಬೈ: ಶಿಖರ್ ಧವನ್ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ ಪಂಜಾಬ್ ತಂಡ ಚೆನ್ನೈ ವಿರುದ್ಧ 11 ರನ್ ಗಳ ರೋಚಕ ಗೆಲುವು ದಾಖಲಿಸಿದೆ.
ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಪಂಜಾಬ್ ಪರ ಅರಂಭಿಕರಾಗಿ ಕಣಕ್ಕಿಳಿದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಶಿಖರ್ ಧವನ್ ಉತ್ತಮ ಆರಂಭ ಕೊಡುವಲ್ಲಿ ಎಡವಿದರು.
ಮಯಾಂಕ್ 18 ರನ್ ಗಳಿಸಿ ವೇಗಿ ತೀಕ್ಷ್ಣಗೆ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್ ಜೊತೆಗೂಡಿದ ಭಾನುಕಾ ರಾಜಪಕ್ಸ ಒಳ್ಳೆಯ ಸಾಥ್ ಕೊಟ್ಟರು. 100 ರನ್ ಗಳ ಜೊತೆಯಾಟ ನೀಡಿತು.
42 ರನ್ ಗಳಿಸಿದ್ದ ರಾಜಪಕ್ಸ ಬ್ರಾವೋಗೆ ವಿಕೆಟ್ ಒಪ್ಪಿಸಿದರು.ಬೌಂಡರಿಗಳ ಸುರಿಮಳೆಗೈದ ಧವನ್ 37 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಜೊತೆಗೆ ಐಪಿಎಲ್ನಲ್ಲಿ 6 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಲಿಯಾಮ್ ಲಿವೀಂಗ್ ಸ್ಟೋನ್ 19, ಜಾನಿ ಬೈರ್ ಸ್ಟೋ 6 ರನ್ ಗಳಿಸಿದರು.
ಧವನ್ 59 ಎಸೆತದಲ್ಲಿ 9 ಬೌಂಡರಿ 2 ಸಿಕ್ಸರ್ ನೊಂದಿಗೆ ಅಜೇಯ 88 ರನ್ ಗಳಿಸಿದರು. ಪಂಜಾಬ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು.
188 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಚೆನ್ನೈ ತಂಡಕ್ಕೆ ಒಳ್ಳೆಯ ಆರಂಭ ಸಿಗಲಿಲ್ಲ. ರಾಬಿನ್ ಉತ್ತಪ್ಪ 1, ಮಿಚೆಲ್ ಸ್ಯಾಂಟ್ನರ್ 9, ಶಿವಂ ದುಬೆ 8 ರನ್ ಗಳಿಸಿದರು.ಋತುರಾಜ್ ಗಾಯಕ್ವಾಡ್ 30 ರನ್ ಗಳಿಸಿದರು.
ಐದನೆ ವಿಕೆಟ್ಗೆ ಜೊತೆಗೂಡಿದ ಅಂಬಾಟಿ ರಾಯ್ಡು ಹಾಗೂ ನಾಯಕ ರವೀಂದ್ರ ಜಡೇಜಾ 64 ರನ್ ಗಳ ಜೊತೆಯಾಟ ನೀಡಿ ಭರವಸೆ ಮೂಡಿಸಿದರು.
78 ರನ್ ಗಳಿಸಿದ್ದ ಅಂಬಾಟಿ ರಾಯ್ಡು ರಬಾಡ ಎಸೆತದಲ್ಲಿ ಬೌಲ್ಡ ಆದರು, ಕೊನೆಯಲ್ಲಿ ಧೋನಿ 12, ಡ್ವೇನ್ ಪ್ರಿಟೋರಿಯಸ್ ಅಜೇಯ 1 ರನ್ ಗಳಿಸಿದರಾದರೂ ಪ್ರಯೋಜನಾವಾಗಲಿಲ್ಲ.
ಚೆನ್ನೈ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸುವಲ್ಲಿ ಮಾತ್ರ ಶಕ್ತವಾಯಿತು. ಶಿಖರ್ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.