- Advertisement -
Manglore News: ಶಾಲೆಯ ಬಳಿ ಬಾರ್ ತೆರೆಯುವದು ಕಾನೂನುಬಾಹಿರ. ಸರಕಾರದ ಮಾರ್ಗದರ್ಶನವನ್ನು ಪಾಲಿಸದೆ ಬಾರ್ ಆಂಡ್ ರೆಸ್ಟೋರೆಂಟ್ ಗೆ ಅನುಮತಿ ನೀಡಲಾಗಿದೆ. ಶಾಲೆಯ ಆವರಣದ 100 ಮೀ ಅಂತರದಲ್ಲಿ ಯಾವುದೇ ಅಮಲು ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ. ಅದನ್ನು ಕಡೆಗಣಿಸಿ ತರಾತುರಿಯಲ್ಲಿ ಬಾರ್‌ನ್ನು ತೆರೆಯಲಾಗಿದೆ.
ಮಂಗಳೂರು ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಣ್ಯಕೋಟಿನಗರದ ಸಮೀಪದ ಶಾಲೆಯ ಆವರಣದ ಬಳಿ ಬಾರ್ ಎಂಡ್ ರೆಸ್ಟೋರೆಂಟ್ ತೆರೆದಿರುವುದನ್ನ ವಿರೋಧಿಸಿ ಪುಣ್ಯಕೋಟಿ ನಗರ ಶಾರದಾ ವಿದ್ಯಾಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಗ್ರಾಮಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು ಎಂದು ತಿಳಿದು ಬಂದಿದೆ.
- Advertisement -