Friday, April 4, 2025

Latest Posts

ಬ್ಯಾಗಲ್ಲಿ ತ್ರಿಶೂಲ ಇಟ್ಕೊಳ್ಳಿ ಲವ್ ಜಿಹಾದ್, ಅತ್ಯಾಚಾರ ಮಾಡಲು ಬಂದವರಿಗೆ ಚುಚ್ಚಿ: ಪ್ರಮೋದ್ ಮುತಾಲಿಕ್

- Advertisement -

Hubli News: ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ, ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಶ್ರೀ ರಾಮ ಸೇನೆ ಮಹಿಳೆಯರಿಗೋಸ್ಕರ ತ್ರಿಶೂಲ ದೀಕ್ಷೆ ನೀಡಿತ್ತು. ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮುಸ್ಲಿಂ ಯುವಕನ ಪ್ರೀತಿ ನಿರಾಕರಿಸಿದಕ್ಕೆ ಆತ್ಮಹತ್ಯೆಗೆ ಯತ್ನಿಸಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು, ಭೇಟಿ ನೀಡಿ ಆರೋಗ್ಯ ವಿಚಾರಸಿ ತ್ರಿಶೂಲ ಪ್ರದರ್ಶನ ಮಾಡಿದರು.

ನಿನ್ನೆ ದಿನದಂದು ಕುಂದಗೋಳ ಪಟ್ಟಣದ ನಿವಾಸಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ಲವ್ ಮಾಡು ಲವ್ ಮಾಡು ಎಂದು ಮುಸ್ಲಿಂ ಯುವಕ ಸೀರಾಜ್ ಹಂಚಿನಾಳ ಟಾರ್ಚರ್ ಕೊಡುತ್ತಿದ್ದನಂತೆ, ಅಷ್ಟೇ ಅಲ್ಲೆ ರಮಜಾನ್ ದಿನ ಹಾಸ್ಟಲ್ ಗೆ ಹೋಗಿ ಅವಳ ಮೇಲೆ ಹಲ್ಲೆ ಕೂಡ ಮಾಡಿದ್ದನಂತೆ. ಇದಕ್ಕೆ ಮನನೊಂದ ವಿದ್ಯಾರ್ಥಿನಿ 13 ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

ಇದನ್ನು ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಎಂದು ಆರೋಪ ಕೂಡ ಮಾಡಿದ್ದರು. ಇಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ತ್ರಿಶೂಲ ಪ್ರದರ್ಶನ ಮಾಡಿದರು. ಪ್ರತಿಯೊಬ್ಬ ಮಹಿಳೆಯರು, ಯುವತಿಯರು ತಮ್ಮ ತಮ್ಮ ಬ್ಯಾಗಲ್ಲಿ ತ್ರಿಶೂಲ ಇಟ್ಟುಕೊಳ್ಳಿ, ಯಾರಾದ್ರೂ ಲವ್ ಜಿಹಾದಿಗಳು, ಅತ್ಯಾಚಾರ ಮಾಡಲು ಬಂದವರಿಗೆ ಚುಚ್ಚಿ ಬಿಡಿ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಇನ್ನು ನೇಹಾ ಹಿರೇಮಠ ಹತ್ಯೆಯಾಗಿ ಏಪ್ರಿಲ್ 18 ಕ್ಕೆ ಒಂದು ವರ್ಷ ಆಗುತ್ತೆ, ಅಂದು ಶ್ರೀರಾಮಸೇನೆ ಒಂದು ಸಾವಿರ ಮಹಿಳೆಯರಿಗೆ ತ್ರಿಶೂಲ ದಿಕ್ಷೆ ನೀಡಿತ್ತು. ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡ್ತಿದ್ದಾರೆ. ಇನ್ಮುಂದೆಯಾದ್ರೂ ಯುವತಿಯರು ಎಚ್ಚರವಾಗಿರಿ ಎಂದು ಶ್ರೀರಾಮ ಸೇನೆ ಮನವಿ ಮಾಡಿಕೊಂಡಿದೆ.

- Advertisement -

Latest Posts

Don't Miss