Tuesday, October 14, 2025

Latest Posts

ರೈಲ್ವೇ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಲಕ್ಷ ಲಕ್ಷ ಪಂಗನಾಮ ಹಾಕಿ; ಜೈಲು ಸೇರಿದ ಪ್ರಶಾಂತ ದೇಶಪಾಂಡೆ

- Advertisement -

Hubballi News: ಹುಬ್ಬಳ್ಳಿ: ಈಗಿನ ಕಾಲದಲ್ಲಿ ಸರ್ಕಾರಿ ನೌಕರಿ ಯಾರಿಗೆ ಬೇಡ ಹೇಳಿ ಜೀವನದಲ್ಲಿ ಒಮ್ಮೆ ಸರ್ಕಾರಿ ನೌಕರಿ ಸಿಕ್ಕರೆ ಸಾಕು ನಮ್ಮ ಜೀವನ ಸೆಟ್ಲ್ ಆಗತ್ತೆ ಎಂದುಕೊಳ್ತಾರೆ. ಹೀಗಾಗಿ ದುಡ್ಡು ಕೊಟ್ಟು ಆದ್ರೂ ಕೂಡಾ ಸರ್ಕಾರಿ ನೌಕರಿ ಪಡೆಯಲು ನಮ್ಮಲ್ಲಿ ಸಾಕಷ್ಟು ಜನ ಕೈಯಲ್ಲಿ ಹಣ ಹಿಡಿದುಕೊಂಡು ಕ್ಯೂ ನಿಂತಿರ್ತಾರೆ. ಇಂತವರನ್ನ ಟಾರ್ಗೆಟ್ ಮಾಡಿ ಅವರ ಬಳಿಯಿದ್ದ ಹಣ ಪಡೆದು ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಆಸಾಮಿಯನ್ನು ಕಂಬಿ ಹಿಂದೆ ತಳ್ಳುವಲ್ಲಿ ಕಸಬಾಪೇಟೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಶಾಂತ ದೇಶಪಾಂಡೆ ವಿಜಯಪುರ ಜಿಲ್ಲೆಯವನಾಗಿದ್ದು, ಹುಬ್ಬಳ್ಳಿಯ ನೇಕಾರ ನಗರದ ವ್ಯಕ್ತಿಯೊಬ್ಬರಿಗೆ ರೈಲ್ವೇ ಇಲಾಖೆಯಲ್ಲಿ ನೌಕರಿ ಕೊಡಿಸುತ್ತೇನೆ ಎಂದು 31 ಲಕ್ಷ ಹಣವನ್ನು ಪಡೆದು ವಂಚನೆ ಮಾಡಿದ್ದ. ಹೀಗಾಗಿ ಮೋಸ ಹೋದವರು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಕಸಬಾಪೇಟೆ ಠಾಣೆಯ ಇನ್ಸಪೆಕ್ಟರ್ ರಾಘವೇಂದ್ರ ಹಳ್ಳೂರ್, ಪಿಎಸ್ಐ ವಿಶ್ವನಾಥ ಹಾಗೂ ಸಿಬ್ಬಂದಿಗಳಾದ ರಾಮಾಪುರ, ಬಾಲಯ್ಯ ಬೆಂಗಳೂರಿನಲ್ಲಿ ಆರೋಪಿ ಪ್ರಶಾಂತ ದೇಶಪಾಂಡೆಯನ್ನು ಬಂಧನ ಮಾಡಿ ಹುಬ್ಬಳ್ಳಿಗೆ ಕರೆ ತಂದು ವಿಚಾರಣೆ ಮಾಡಿದಾಗ ಶಿವಮೊಗ್ಗ ಮೂಲದ ಶ್ವೇತಾ ಹಾಗೂ ಇನ್ನೊಂದಿಷ್ಟು ಜನ ಈ ಕೃತ್ಯದಲ್ಲಿ ಭಾಗಿಯಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಹುಣಸೂರಿನಲ್ಲಿ ಕರ್ತವ್ಯನಿರತ ಹೋಂಗಾರ್ಡ್ ಮೇಲೆ ಹಲ್ಲೆ, ಆರೋಪಿ ಬಂಧನ

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ: ಸಂಗ್ರಹ ಘಟಕದ ಬಳಿ ಚರಂಡಿಗೆ ಪೋಲಾಗುತ್ತಿರುವ ನೀರು

‘ಅಧರ್ಮ ಅಳಿಸಲು ಶ್ರೀಕೃಷ್ಣನ ಅವತಾರದಂತೆ ನರೇಂದ್ರ ಮೋದಿಯವರು ದೇಶದಲ್ಲಿ ಇದ್ದಾರೆ’

- Advertisement -

Latest Posts

Don't Miss