- Advertisement -
ಬೆಂಗಳೂರು: ಇದು ಕಳ್ಳರ ದೇಶ, ಒಳ್ಳೆಯವರ ಮೇಲೆ ಮಾತ್ರ ತನಿಖೆ ಮಾಡ್ತಾರೆ. ನನ್ನ ಮೇಲೆ ಆರೋಪ ಬಂದಾಗ ನಾನೇ ತನಿಖೆ ಮಾಡಿ ಅಂತ ಸದನಕ್ಕೆ ಪತ್ರ ಬರೆದುಕೊಟ್ಟಿದ್ದೆ ಅಂತ ಸಚಿವ ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡುತ್ತಿದ್ದ ಲೋಕೋಪಯೋಗಿ ಸಚಿವ ರೇವಣ್ಣ, ಇದು ಕಳ್ಳರ ದೇಶ, ಒಳ್ಳೆಯವರ ಮೇಲೆ ಮಾತ್ರ ತನಿಖೆ ಮಾಡುತ್ತಾರೆ. ಇಂಧನ ಸಚಿವನಾಗಿದ್ದ ವೇಳೆ ರೇವಣ್ಣ ಏನೋ ಕೊಳ್ಳೆಹೊಡೆದುಬಿಟ್ಟಿದ್ದಾನೆ ಅಂತ ನನ್ನ ವಿರುದ್ಧ ಕೂಡ ತನಿಖೆ ನಡೆಸಿದ್ರು. ನನ್ನ ವಿರುದ್ಧ ತನಿಖೆ ಮಾಡಿ ಅಂತ ನಾನೇ ಸದನದಲ್ಲಿ ಸ್ಪೀಕರ್ ಹಾಗೂ ಸಿದ್ದರಾಮಯ್ಯನವರಿಗೆ ಪತ್ರ ಬರೆದುಕೊಟ್ಟಿದ್ದೆ ಅಂತ ಹೇಳಿದ ಸಚಿವ ರೇವಣ್ಣ, ಬಹುಶಃ ಈ ರೀತಿ ಸವಾಲು ಹಾಕಿದ್ದ ವ್ಯಕ್ತಿ ಇದ್ದರೆ ಅದು ನಾನೊಬ್ಬನೇ ಅಂತ ಹೇಳಿದ್ದಾರೆ.
ಸಿಎಂಗೆ ಟೆನ್ಶಂನ್ ಕೊಡ್ತಿರೋದು ಯಾರು..? ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -