ಕೋಲಾರ: ಕೋಲಾರ ಜಿಲ್ಲೆಯ ಟೇರಲ್‌ನಲ್ಲಿ ಕೆಂಪೇಗೌಡ ರಥಯಾತ್ರೆ ವೇಳೆ ಗಲಾಟೆ ವಿಚಾರವಾಗಿ, ಮಾಜಿ ಶಾಸಕ ಮಂಜುನಾಥ್ ಗೌಡ ಹಲ್ಲೆ ನಡೆಸಿರೋ ವೀಡಿಯೋ ವೈರಲ್ ಆಗಿದೆ.
ಹಿರಿಯ ಬಿಜೆಪಿ ಮುಖಂಡ ಗೋಪಾಲಗೌಡರಿಗೆ ಹಿಂಬದಿಯಿಂದ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಇದಕ್‌ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆ ಮಾಡಿದ್ದಲ್ಲದೇ, ಕೆಂಪೇಗೌಡರ ರಥಯಾತ್ರೆಯ ವಾಹನ ಚಾಲಕನನ್ನ ಬಲವಂತವಾಗಿ ಕೆಳಗಿಳಿಸಿ ವಾಹನ ಚಲಾಯಿಸಲು ಮಂಜುನಾಥ್ ಗೌಡ ಮುಂದಾಗಿದ್ದಾರೆ.
‘ಭವಾನಿ ಅಕ್ಕನವರು ಈ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಬೇಕು’
ಶುಕ್ರವಾರ ಸಂಜೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಥಯಾತ್ರೆ ಸ್ವಾಗತಿಸುವ ವಿಚಾರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ.
ಮಾಜಿ ಶಾಸಕ ಮಂಜುನಾಥ್ ಗೌಡ ಹಾಗೂ ಹೂಡಿ ವಿಜಯ್ ಕುಮಾರ್ ಬಣಗಳ ನಡುವೆ ಗಲಾಟೆ ನಡೆದಿತ್ತು. ಯಾರ ಮೇಲೂ ಹಲ್ಲೆ ನಡೆಸಿಲ್ಲ ರಥಯಾತ್ರೆ ಮುಂದೆ ಹೋಗದಂತೆ ತಡೆದಿದ್ದು ದುಷ್ಕರ್ಮಿಗಳು ಎಂದು ಮಂಜುನಾಥ್ ಗೌಡ ವಾಗ್ದಾಳಿ ನಡೆಸಿದ್ದಾರೆ. ಆದ್ರೆ ಮಂಜುನಾಥ್ ಗೌಡ ದೌರ್ಜನ್ಯ ನಡೆಸಿ ಹಲ್ಲೆ ನಡೆಸಿದ್ದಾರೆಂದು ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಹೇಳಿದ್ದಾರೆ.