Friday, June 20, 2025

Latest Posts

ಯಂಗ್ ರೆಬಲ್ ಸ್ಟಾರ್ ಜೊತೆಯಾದ ಡಿಂಪಲ್ ಕ್ವೀನ್… ಅಭಿ ‘ಬ್ಯಾಡ್ ಮ್ಯಾನರ್ಸ್’ ಗೆ ಇಬ್ಬರು ನಾಯಕಿರು

- Advertisement -

ಅಮರ್ ಸಿನಿಮಾ ಬಳಿಕ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ನಟಿಸ್ತಿರುವ ಬಹುನಿರೀಕ್ಷಿತ ಚಿತ್ರ ಬ್ಯಾಡ್ ಮ್ಯಾನರ್ಸ್. ಸೆಟ್ಟೇರಿದ ದಿನದಿಂದ ಸಖತ್ ಕ್ಯೂರಿಯಾಸಿಟಿ ಹುಟ್ತಿರುವ ಈ ಸಿನಿಮಾಕ್ಕೆ ಹೀರೋಯಿನ್ ಯಾರು ಆಗ್ತಾರೆ…? ಅಭಿ ಜೊತೆ ರೊಮ್ಯಾನ್ಸ್ ಮಾಡುವವರು ಯಾರು..? ಅನ್ನೋ ಪ್ರಶ್ನೆಗಳು ಅಭಿಮಾನಿಗಳಲ್ಲಿ ಕಾಡಿದ್ದಂತು ಸುಳ್ಳಲ್ಲ. ಇದೀಗ ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ಅಭಿ ಜೊತೆ ರಚ್ಚು-ಪ್ರಿಯಾಂಕಾ

ಅಭಿಷೇಕ್ ಅಂಬರೀಷ್ ಎರಡನೇ ಸಿನಿಮಾಕ್ಕೆ ಡಿಂಪಲ್ ಕ್ವೀನ್ ರಚಿತಾ ನಾಯಕಿಯಾಗಿ ನಟಿಸ್ತಿದ್ದಾರೆ. ಈಗಾಗ್ಲೇ ಅಮರ ಸಿನಿಮಾದಲ್ಲಿ ಅಭಿ ಜೊತೆ ಹೆಜ್ಜೆ ಹಾಕಿದ್ದು ರಚ್ಚು, ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಅಭಿ ಜೊತೆ ರೊಮ್ಯಾನ್ಸ್ ಮಾಡಲು ಓಕೆ ಎಂದಿದ್ದಾರಂತೆ.

ಇನ್ನು, ಸಿನಿಮಾದಲ್ಲಿ‌ ರಚಿತಾ ಜೊತೆ ಮತ್ತೋರ್ವ ನಾಯಕಿ ಕೂಡ ಇರಲಿದ್ದಾರೆ. ಕಿರುತೆರೆ ನಟಿ ಪ್ರಿಯಾಂಕಾ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ.

ಅಂದಹಾಗೇ ಸಿನಿಮಾಕ್ಕೆ ಸೂಕ್ಕ ಸೂರಿ ಆ್ಯಕ್ಷನ್ ಕಟ್ ಹೇಳಿದ್ದು, ನಟಿ ತಾರಾ, ಶರತ್ ಲೋಹಿತಾಶ್ವ ಮತ್ತಿತರ ತಾರಾಬಣ ಚಿತ್ರದಲ್ಲಿದೆ.

- Advertisement -

Latest Posts

Don't Miss