ಹಾಸ್ಟೆಲ್ನಲ್ಲಿ ಇಂಜಿನಿಯರ್ ವಿದ್ಯಾರ್ಥಿಗಳು ಸಹಪಾಠಿಯನ್ನು ಥಳಿಸಿದ್ದಾರೆ. ಎಷ್ಟೇ ಕಠೀಣವಾದ ಕಾನೂನುಗಳಿದ್ದರು, ರ್ಯಾಗಿಂಗ್ ಎಂಬ ಹುಚ್ಚಾಟ ಇನ್ನೂ ಹಲವು ಕಾಲೇಜು, ಹಾಸ್ಟೇಲ್ಗಳಲ್ಲಿ ಕಡಿಮೆಯಾಗಿಲ್ಲ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಮತ್ತು ಪ್ರಾಣ ಕಳೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಹಾಸ್ಟೆಲ್ನ ರೂಮಿನಲ್ಲಿ ವಿದ್ಯಾರ್ಥಿಗಳು ಸಹಪಾಟಿಯನ್ನು ಥಳಿಸಿ ಇಸ್ತ್ರಿ ಪೆಟ್ಟಿಗೆಯಿಂದ ಮೈ ಸುಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ನಾಲ್ಕು ಜನ ವಿದ್ಯಾರ್ಥಿಗಳನ್ನು ಬಂಧಿಸಿಸಲಾಗಿದೆ.
ವಿದ್ಯಾರ್ಥಿ ತನ್ನನ್ನು ಬಿಡುವಂತೆ ಕೈ ಮುಗಿದು ಬೇಡಿಕೊಂಡರು, ಶರ್ಟ್ ತೆಗೆಯಲು ಹೇಳಿ ಕೋಲಿನಿಂದ ರೂಮಿನಲ್ಲಿರುವ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ. ರ್ಯಾಗಿಂಗ್ ಒಳಗಾದ ಯುವಕ ಮತ್ತು ಎಲ್ಲಾ ಆರೋಪಿಗಳು ಎಸ್ಆರ್ಕೆರ್ ಇಂಜಿನಿಯರ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಾರೆ. ಥಳಿತಕ್ಕೊಳಗಾದ ವಿದ್ಯಾರ್ಥಿ ಅಂಕಿತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಲ್ಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.