Monday, December 23, 2024

Latest Posts

‘ಕಾಂಗ್ರೆಸ್ ಮಾತ್ರವಲ್ಲ, ಹತ್ತಾರೂ ಪಕ್ಷ ಸೇರಿದರೂ ಭಜರಂಗದಳ ಬ್ಯಾನ್ ಮಾಡಲು ಸಾಧ್ಯವಿಲ್ಲ’

- Advertisement -

ಹಾಸನ: ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಕಾಂಗ್ರೆಸ್ ನಿಷೇಧ ವಿಚಾರ ಪ್ರಸ್ತಾಪ ಹಿನ್ನೆಲೆ, ಕಾಂಗ್ರೆಸ್ ವಿರುದ್ಧ ಭಜರಂಗದಳ ಸಂಘಟನೆ ಮುಖಂಡ ರಘು ಸಕಲೇಶಪುರ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುತ್ತೇನೆ ಅಂತಾ ಕಾಂಗ್ರೆಸ್ ಹೇಳಿರೋದು ಹಾಸ್ಯಾಸ್ಪದ. ಈ ವಿಚಾರದಲ್ಲಿ ಕಾಂಗ್ರೆಸ್ ಬಹಳ ಗಂಭೀರ ಹಾಗೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಭಜರಂಗದಳ ಸಂಘಟನೆ ದೇವರು ನಿರ್ಮಾಣ ಮಾಡಿರೋ ಸಂಘಟನೆ. ಇದೊಂದು ದೇಶಭಕ್ತ ಸಂಘಟನೆಯಾಗಿದೆ. ತನ್ನ ದೇಶಕ್ಕೆ ಏನಾದ್ರು ಆಪತ್ತು ಬರುತ್ತೆ ಅಂದ್ರೆ ಭಜರಂಗದಳದ ಕಾರ್ಯಕರ್ತರು, ತಮ್ಮ ಪ್ರಾಣವನ್ನೂ ತ್ಯಾಗ ಮಾಡೋದಕ್ಕೆ ಸಿದ್ದವಿರುತ್ತದೆ. ಇಂತಹ ದೇಶಭಕ್ತ ಸಂಘಟನೆಯನ್ನ ಕಾಂಗ್ರೆಸ್ ಮಾತ್ರವಲ್ಲ ಯಾವುದೇ ಪಕ್ಷ ಬಂದರೂ, ಹತ್ತಾರು ಪಕ್ಷಗಳು ಒಗ್ಗೂಡಿದರೂ ಸಹ ಅದನ್ನ ನಿಷೇಧ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ರಘು ಹೇಳಿದ್ದಾರೆ.

ಲೋಕಸಭೆಯಲ್ಲಿ  430ಕ್ಕೂ ಸ್ಥಾನವಿದ್ದಾಗಲೇ ಆರ್ ಎಸ್ ಎಸ್ ನ ಬ್ಯಾನ್ ಮಾಡ್ತಿನಿ ಅಂತಾ ಹೋಗಿದ್ರು. ಆಗಲೇ ಬ್ಯಾನ್ ಮಾಡೋದಕ್ಕೆ ಆಗಲಿಲ್ಲ. ಈಶ್ವರಿ ಕಾರ್ಯವನ್ನ ಮಾಡ್ತಿರುವಂತಹ ಈ ಸಂಘನೆಗಳ ಬಗ್ಗೆ, ಆಂಜನೇಯನ ಶಕ್ತಿ ಇರುವ ಭಜರಗದಳದಂತಹ ಸಂಘಟನೆ ಮೇಲೆ , ನಿಷೇಧಂತಹ ಮಾತಾಡಿರುವಂತಹ ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದೆ. ಈಗಾಗಲೇ ಕಾಂಗ್ರೆಸ್ ಕಟ್ಟಕಡೆಯ ದಿನಗಳನ್ನ ಕಾಣ್ತಿದೆ. ಇಂತಹ ಹೇಳಿಕೆ ಕೊಟ್ಟಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಹಿಂದೂ ಸಮಾಜ ಹಾಗೂ ಹಿಂದೂ ಸಂಘಟನೆಗಳ ಭಾವನೆಗೆ ಧಕ್ಕೆ ತಂದಿದೆ. ಇದರ ವಿರುದ್ಧ ಭಜರಂಗದಳ ಸಂಘಟನೆ ಹೋರಾಡುತ್ತದೆ. ಇನ್ನೂ 30 ವರ್ಷ ಕಳೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ರಿಲೀಸ್: ಭಜರಂಗದಳ, ಪಿಎಫ್‌ಐ ನಿಷೇಧಕ್ಕೆ ನಿರ್ಧಾರ..

‘ಕಾಂಗ್ರೆಸ್ ಪಕ್ಷದವರಿಗೆ ತಾಕತ್ತಿದ್ರೆ ರಿಸರ್ವೇಷನ್, ಭಜರಂಗದಳ ಟಚ್ ಮಾಡಲಿ ನೋಡೋಣ’

ಮಂಡ್ಯದಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋ, ಅಶೋಕ್ ಪರ ಮತಯಾಚನೆ..

- Advertisement -

Latest Posts

Don't Miss