Hubli News: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಇನ್ನು ಹಲವಾರು ವರ್ಷಗಳ ಕಾಲ ಬಿಜೆಪಿ ದೇಶದಲ್ಲಿ ಆಡಳಿತ ಮಾಡಲಿದೆ. ರಾಹುಲ್ ಗಾಂಧಿ ಒಬ್ಬ ಇಮ್ಮೆಚುರಡ್ ಮನುಷ್ಯ. ಲೋಕಸಭೆಯಲ್ಲಿ ರಾಹುಲ್ ಗಾಂಧಿ,ಹಾಗೂ ಅವರ ಸಹೋದರಿ ಲೋಕಸಭೆಗೆ ಬರಲೇ ಇಲ್ಲ. ಅದು ರಾಹುಲ್ ಗಾಂಧಿ ವೋಟಿಂಗ್ ಟೈಮ್ ಗೆ ಬಂದರೂ. ರಾಜಾಕರಣದಲ್ಲಿದ್ದವರಿಗೆ ಸೌಜನ್ಯ ಇರಬೇಕು. ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ದ ಪ್ರತಿಭಟನೆ ಮಾಡತೀದಾರೆ. ವಕ್ಫನಲ್ಲಿ ನಾವು ಪ್ರಮುಖ ಬದಲಾವಣೆ ಮಾಡಿದ್ದೇವೆ. ಕೇರಳದಲ್ಲಿ ಕ್ರಿಶ್ಚಿಯನ್ ಸೆಲೆಬ್ರೇಷನ್ ಮಾಡಿದ್ದಾರೆ. ಒಂದು ಮಸೀದಿ,ಒಂದು ದರ್ಗಾ,ಅವರ ಹೆಸರಲ್ಲಿ ಇರೋದು ಡಿಸ್ಟರ್ಬ್ ಆಗಲ್ಲ. ಕ್ರಿಶ್ಚಿಯನ್ ಸಮುದಾಯದ ವೋಟ್ ಕಡಿಮೆ ಇರೋ ಕಾರಣಕ್ಕೆ ಕಾಂಗ್ರೆಸ್ ಅವರನ್ನು ಕೈ ಬಿಟ್ಟಿದೆ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಜೋಶಿ ಆರೋಪಿಸಿದ್ದಾರೆ.
ಅಣ್ಣಮಲೈ ವಿಷಯ ರಾಜೀನಾಮೆ ಕೊಡ್ತಿರೋ ವಿಷಯ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬರ್ತಿದೆ. ರಾಜೀನಾಮೆ ಕೊಟ್ಟರೆ ಅವರಿಗೆ ಬೇರೆ ಹುದ್ದೆ ಕೊಡಬಹುದು. ನನಗೆ ಇತ್ತೀಚೆಗೆ ಅಣ್ಣಮಲೈ ಸಿಕ್ಕಿಲ್ಲ. ಎರಡು ಮೂರು ತಿಂಗಳಿಂದ ಸಿಕ್ಕಿದ್ರು. ಕಾಂಗ್ರೆಸ್ ಪಾರ್ಟಿ ಇರೋ ಕಡೆ ಇಲ್ಲಿಗಲ್ ಚಟುವಟಿಕೆ ಬಹಳ. ಕಾಂಗ್ರೆಸ್ ಅಂದ್ರೆ ಕ್ರಿಮಿನಲ್ ಗಳಿಗೆ, ಇಲ್ಲೀಗಲ್ ಚಟುವಟಿಕೆ ಮಾಡೋರಿಗೆ ಸ್ವರ್ಗದ ಭಾಗಿಲು ತೆರೆದಂತೆ. ಕಾಂಗ್ರೆಸ್ ಪಾರ್ಟಿಯಲ್ಲಿರೋ ಮಂತ್ರಿಗಳು ಸ್ನೇಹಿತರೇ ಅಲ್ಲಿ ಇರ್ತಾರೆ. ಹೀಗಾಗಿ ಅವರೇ ಏನೂ ಆಗಲ್ಲ ಎಂದು ಜೋಶಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಾರ್ಟಿಯ ಅನೇಕ ಮಂತ್ರಿಗಳು ನನ್ನ ಬಳಿ ಬಂದಿದ್ದಾರೆ. ಕೇಂದ್ರದಿಂದ ದುಡ್ಡು ಕೊಡಿಸಿ ಎಂದಿದ್ದಾರೆ. ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ. ಇವಾಗ ಆಗತಿರೋ ರಸ್ತೆಗಳು ಹಿಂದಿನ ಸರ್ಕಾರದಲ್ಲಿ ಅಪ್ರೂವಲ್ ಆಗಿರೋದು. ಈ ಸರ್ಕಾರ ಸರಿಯಾಗಿ ಪೇಮೆಂಟ್ ಕೊಡತಿಲ್ಲ. ಟೆಂಡರ್ ಹಾಕಸೋಕು ಸಮಸ್ಯೆ ಇದೆ. ಖರ್ಗೆ ಅವರೇ ದುಡ್ಡಿಲ್ಲ ಎಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.