National News: ಶುಕ್ರವಾರ ರಾಹುಲ್ ಗಾಂಧಿ ಅರ್ಜಿ ವಿಚಾರವಾಗಿ ಹಿನ್ನಡೆಯಾದ ಬೆನ್ನಲ್ಲೇ ಇದೀಗ ಮತ್ತೆ ರಾಗಾ ಸುದ್ದಿಯಾಗಿದ್ದಾರೆ. ಇದೀಗ ಗದ್ದೆಗೆ ಇಳಿದು ಭತ್ತದ ನಾಟಿ ಮಾಡಿ ವಿಸ್ಮಯ ಮಾಡಿದ್ದಾರೆ. ಹೌದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಹರಿಯಾಣದ ಸೋನಿಪತ್‌ನ ಮದೀನಾ ಗ್ರಾಮದಲ್ಲಿ ಭತ್ತದ ನಾಟಿ ಬಿತ್ತನೆಗೆ ರೈತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಬರೋಡಾದ ವಿವಿಧ ಗ್ರಾಮಗಳಲ್ಲಿ ರೈತರನ್ನು ರಾಗಾ ಭೇಟಿ ಮಾಡಿದರು. ಬರೋಡಾ ಮತ್ತು ಮದೀನಾದಲ್ಲಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅವರು ಬಿತ್ತನೆ ಪ್ರಕ್ರಿಯೆಯಲ್ಲಿ ಅವರೊಂದಿಗೆ ಸೇರಿಕೊಂಡರು ಎನ್ನಲಾಗಿದೆ.
ರೈತರು ಹೊಲದಲ್ಲಿ ಭತ್ತವನ್ನು ನೆಡುತ್ತಿರುವುದನ್ನು ನೋಡಿದ ತಕ್ಷಣ ಕಾಂಗ್ರೆಸ್ ನಾಯಕ ತನ್ನ ಕಾರಿನಿಂದ ಇಳಿದು ಹೊಲಕ್ಕೆ ಹೋಗಿ ಟ್ರಾಕ್ಟರ್ ನೊಂದಿಗೆ ಉಳುಮೆ ಮಾಡಿದರು. ಮತ್ತು ರೈತರೊಂದಿಗೆ ಭತ್ತವನ್ನು ನಾಟಿ ಮಾಡಿ ರೈತರೊಂದಿಗೆ ಸಮಾಲೋಚನೆ ನಡೆಸಿ ತಮ್ಮ ಸರಳತೆಯನ್ನು ತೋರ್ಪಡಿಸಿದರು ರಾಹುಲ್ ಗಾಂಧಿ.
Tamilnadu News: ಮಾಜಿ ಸಿಎಂ ಸೀರೆ ಬೆಂಗಳೂರಿಗೆ ಹಸ್ತಾಂತರ..?! ಏನಿದು ನಾರಿ ಸೀರೆ ರಹಸ್ಯ..?!