Friday, November 22, 2024

Latest Posts

‘ಈ ಕಾರಣಕ್ಕೇ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರವೇ ಸಂಸತ್ತನ್ನು ನಡೆಯಲು ಬಿಡಲಿಲ್ಲ’

- Advertisement -

ಕೋಲಾರ : ಕೋಲಾರದಲ್ಲಿ ಸತ್ಯಮೇವ ಜಯತೇ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು, ಅದಾನಿಗೆ ಪ್ರಧಾನಿ ಮೋದಿ ಸಪೋರ್ಟ್ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ನಾನು ಸಂಸತ್ತಿನಲ್ಲಿ ಅದಾನಿ ಅವರ ಬಗ್ಗೆ ಪ್ರಶ್ನೆ ಕೇಳಿದಾಗ, ಅವರು ನನ್ನ ಮೈಕ್ ಆಫ್ ಮಾಡಿದ್ದರು. ನಾನು ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಜತೆಗಿನ ಸಂಬಂಧವೇನು ಎಂದು ಕೇಳಿದೆ. ನಾನು ಸಂಸತ್ತಿನಲ್ಲಿ ಮೋದಿ ಅವರು ಹಾಗೂ ಅದಾನಿ ಅವರ ವಿಮಾನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಚಿತ್ರ ತೋರಿಸಿದೆ. ನಿಮ್ಮ ನಡುವಿನ ಸಂಬಂಧವೇನು ಎಂದು ಕೇಳಿದೆ. ದೇಶದ ವಿಮಾನ ನಿಲ್ದಾಣಗಳು ಅದಾನಿಗೆ ನೀಡುತ್ತಿದ್ದು, ಇದಕ್ಕಾಗಿ ನಿಯಮ ಬದಲಾಯಿಸಿದ್ದು ಯಾಕೆ? ಎಂದು ಕೇಳಿದೆ. ಈ ಹಿಂದೆ ವಿಮಾನ ನಿಲ್ಧಾಣವನ್ನು ಅನುಭವಿಗಳಿಗೆ ನೀಡಬೇಕು ಎಂಬ ನಿಯಮವಿತ್ತು, ಆದರೆ ಅದಾನಿ ಅವರಿಗೆ ಅನುಭವವಿಲ್ಲದಿದ್ದರೂ ಅವರಿಗೆ ವಿಮಾನ ನಿಲ್ದಾಣ ನೀಡುತ್ತಿರುವುದೇಕೆ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಮುಂಬೈ ವಿಮಾನ ನಿಲ್ದಾಣ ಅದಾನಿಗೆ ಕೊಟ್ಟರು. ಈ ವಿಮಾನ ನಿರ್ಮಾಣ ಮಾಡಿದವರ ವಿರುದ್ಧ ಇಡಿ ಐಟಿ ದಾಳಿ ಮಾಡಿಸಿ ಅವರಿಂದ ಕಿತ್ತು ಅದಾನಿಗೆ ಕೊಟ್ಟಿದ್ದಾರೆ. ಪ್ರಧಾನಿ ಆಸ್ಟ್ರೇಲಿಯಾದ ವೇದಿಕೆಯಲ್ಲಿ ಅದಾನಿ ಹಾಗೂ ಎಸ್ಬಿಐ ಅಧಿಕಾರಿಗಳು ಕೂತಿದ್ದರು. ನಂತರ ಸಾವಿರಾರು ಕೋಟಿ ಹಣವನ್ನು ಎಸ್ಬಿಐ ನಿಂದ ಅದಾನಿ ಅವರಿಗೆ ಸಾಲ ಸಿಗುತ್ತದೆ. ಯಾವ ಅಧಿಕಾರದಿಂದ ಈ ಸಾಲ ಕೊಟ್ಟರು. ಶ್ರೀಲಂಕಾ ಬಂದರಿನ ಅಧ್ಯಕ್ಷರ ಪ್ರಕಾರ ಲಂಕಾದ ಬಂದರುಗಳನ್ನು ಅದಾನಿ ಅವರಿಗೆ ನೀಡಲು ಮೋದಿ ಅವರು ಹೇಳಿದ್ದರು ಎಂದಿದ್ದಾರೆ. ಮೋದಿ ಅವರು ಬಾಂಗ್ಲಾದೇಶ ಪ್ರವಾಸ ಮಾಡಿದ ಬೆನ್ನಲ್ಲೇ ಅದಾನಿ ಅವರಿಗೆ ಬಾಂಗ್ಲಾದೇಶದಲ್ಲಿ ಗುತ್ತಿಗೆ ಸಿಗುತ್ತದೆ. ಪ್ರಧಾನಿ ಇಸ್ರೇಲ್ ಪ್ರವಾಸ ಮಾಡಿದ ನಂತರ ಅಲ್ಲಿಯೂ ಅದಾನಿ ಅವರಿಗೆ ಬಂದರು ಹಾಗೂ ರಕ್ಷಣಾ ವಲಯದ ಗುತ್ತಿಗೆಯನ್ನು ಕೊಡಿಸುತ್ತಾರೆ ಎಂದು ರಾಹುಲ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೀಗಾಗಿ ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಬೇನಾಮಿ ಕಂಪನಿಗಳು ಯಾರದ್ದು, ಇದರಲ್ಲಿರುವ 20 ಸಾವಿರ ಕೋಟಿ ಯಾರದ್ದು ಎಂದು ಕೇಳಿದೆ. ನಂತರ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರವೇ ಸಂಸತ್ತನ್ನು ನಡೆಯಲು ಬಿಡಲಿಲ್ಲ. ಸರ್ಕಾರದ ಸಂಸದರೇ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಿದರು. ನಂತರ ಬಿಜೆಪಿ ಮಂತ್ರಿಗಳು ನನ್ನ ವಿರುದ್ಧ ಸುಳ್ಳು ಹೇಳಿದರು. ಸಂಸತ್ತಿನ ನಿಯಮದ ಪ್ರಕಾರ ಒಬ್ಬ ಸದಸ್ಯ ಮತ್ತೊಬ್ಬ ಸದಸ್ಯನ ಬಗ್ಗೆ ಮಾತನಾಡಿದಾಗ ಆತನಿಗೆ ಮಾತನಾಡಲು ಅವಕಾಶ ನೀಡಬೇಕು. ಹೀಗಾಗಿ ನನ್ನ ಮೇಲಿನ ಆರೋಪದ ಬಗ್ಗೆ ಮಾತನಾಡಲು ಸ್ಪೀಕರ್ ಅವರಿಗೆ 2 ಬಾರಿ ಪತ್ರ ಬರೆದೆ. ಆದರೆ ಅವಕಾಶ ನೀಡಲಿಲ್ಲ ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ನಂತರ ಸ್ಪೀಕರ್ ಅವರ ಕಚೇರಿಗೆ ಹೋಗಿ ಉತ್ತರ ನೀಡಲು ಅವಕಾಶ ನೀಡಿ ಎಂದು ಕೇಳಿದೆ. ಆದರೆ ಅವರು ನಗುತ್ತಾ ನಾನು ಏನು ಮಾಡಲು ಸಾಧ್ಯವಿಲ್ಲ ಎಂದರು. ನೀವು ಸ್ಪೀಕರ್ ಆಗಿದ್ದು, ನೀವು ಅವಕಾಶ ನೀಡುವ ಅಧಿಕಾರವಿದೆ, ಆದರೂ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಕೇಳಿದೆ. ಪುನಃ ನಗುತ್ತಾ ನನ್ನತ್ತ ನೋಡಿದರು. ಅವರಿಗೆ ನಾನು ಸಂಸತ್ತಿನಲ್ಲಿ ಅದಾನಿ ಅವರ ಬಗ್ಗೆ ಪ್ರಸ್ತಾಪ ಮಾಡುವುದು ಬೇಕಾಗಿಲ್ಲ. ನಂತರ ನನ್ನನ್ನು ಸಂಸತ್ತಿನಿಂದ ಅನರ್ಹರನ್ನಾಗಿ ಮಾಡುತ್ತಾರೆ. ಇದರಿಂದ ಅವರು ಹೆದರಿಸಬಹುದು ಎಂದು ಭಾವಿಸಿರಬಹುದು ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ಆದರೆ ನಾನು ಇದಕ್ಕೆಲ್ಲಾ ಹೆದರುವವನಲ್ಲ. ನಾನು ಮತ್ತೆ ಮತ್ತೆ ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಜತೆಗಿನ ಸಂಬಂಧ ಹಾಗೂ ಅದಾನಿ ಅವರ ಬೇನಾಮಿ ಕಂಪನಿಗಳಲ್ಲಿರುವ 20 ಸಾವಿರ ಕೋಟಿ ಯಾರದ್ದು ಎಂದು ಈಗಲೂ ಪ್ರಶ್ನೆ ಮಾಡುತ್ತೇನೆ. ಈ ಪ್ರಶ್ನೆಗೆ ಉತ್ತರ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇನೆ. ನೀವು ನನ್ನನ್ನು ಅನರ್ಹರನ್ನಾಗಿ ಮಾಡಿರಿ, ಜೈಲಿಗೆ ಹಾಕಿರಿ ನನಗೆ ಯಾವುದೇ ತೊಂದರೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅದಾನಿ ಅವರು ಮೋದಿ ಅವರಿಗೆ ಭ್ರಷ್ಟಾಚಾರದ ಮಾದರಿಯಾಗಿದ್ದಾರೆ. ಒಬ್ಬ ವ್ಯಕ್ತಿ ದೇಶದ ಎಲ್ಲಾ ಮೂಲಸೌಕರ್ಯ ಕ್ಷೇತ್ರದ ಸಂಪತ್ತನ್ನು ಪಡೆಯುತ್ತಾನೆ ಇದು 21ನೇ ಶತಮಾನದ ಇತಿಹಾಸ. ಸಾವಿರಾರು ಕೋಟಿ ಹಣ ಮಾಯಾ ಮಂತ್ರದಂತೆ ಅವರ ಖಾತೆಗೆ ಬರುತ್ತದೆ.ಅದಾನಿ ಅವರ  ರಕ್ಷಣಾ ಸಂಸ್ಥೆಯ ನಕಲಿ ಕಂಪನಿಯಲ್ಲಿ ಚೀನಾದ ವ್ಯಕ್ತಿ ನಿರ್ದೇಶಕರಾಗಿದ್ದಾರೆ. ಈತನನ್ನು ಯಾರು, ಯಾಕೆ ಕೂರಿಸಿದ್ದಾರೆ ಎಂಬುದರ ಬಗ್ಗೆ ಯಾರೂ ತನಿಖೆ ಮಾಡುತ್ತಿಲ್ಲ. ಕೇವಲ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಾರೆ ಎಂದು ರಾಹುಲ್ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

‘ಪ್ರಧಾನಿಯವರ ಮೌನ ಈ ಸರ್ಕಾರ 40% ಸರ್ಕಾರ ಎಂದು ಒಪ್ಪಿಕೊಂಡಂತಾಗಿದೆ’

‘ಬಿಜೆಪಿಗೆ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇದ್ದರೆ ಶೇ.50 ಮೀಸಲಾತಿ ಮಿತಿಯನ್ನು ತೆರವುಗೊಳಿಸಲಿ’

‘ಮೇ10 ಮತದಾನದ ದಿನ ಮಾತ್ರವಲ್ಲ. ಭ್ರಷ್ಟ ಬಿಜೆಪಿ ಸರ್ಕಾರ ಬಡಿದೋಡಿಸುವ ದಿನ’

- Advertisement -

Latest Posts

Don't Miss