ಕೋಲಾರ: ಕೋಲಾರದಲ್ಲಿ ಕಾಂಗ್ರೆಸ್‌ನಿಂದ ನಡೆದ ಸತ್ಯ ಮೇವ ಜಯತೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು, ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ರಾಜ್ಯದ ಕಾಂಗ್ರೆಸ್ ಪಕ್ಷ ಜನರಿಗೆ ನೇರ ಸಂದೇಶ ರವಾನಿಸಬೇಕು. ಪ್ರಧಾನಮಂತ್ರಿಗಳಿಗೆ ಸಂದೇಶ ರವಾನೆಯಾಗಬೇಕು. ಪ್ರಧಾನಮಂತ್ರಿಗಳು ಅದಾನಿಯಂತಹ ಉದ್ಯಮಿಗಳಿಗೆ ಸಾವಿರಾರು ಕೋಟಿ ಹಣ ನೀಡುವುದಾದರೆ, ನಾವು ಕೂಡ ದೇಶದ ಜನರಿಗೆ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಿದೆ. ನೀವು ಹೃದಯಪೂರ್ವಕವಾಗಿ ಅಧಾನಿ ಅವರಿಗೆ ನೆರವು ನೀಡಿದರೆ, ನಾವು ಬಡ ಜನರು, ರೈತರು, ಮಹಿಳೆಯರು, ಯುವಕರಿಗೆ ಸಹಾಯ ಮಾಡುತ್ತೇವೆ. ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ? 40% ಕಮಿಷನ್ ತಿಂದಿದ್ದಾರೆ. ಕೆಲಸ ಆಗಬೇಕಾದರೆ ರಾಜ್ಯದ ಜನರ ಲೂಟಿ ಮಾಡಿದೆ. ಅವರು ಮಾಡಿರುವ ಎಲ್ಲ ಕೆಲಸಕ್ಕೂ 40% ಕಮಿಷನ್ ತಿಂದಿದ್ದಾರೆ. ಈ ವಿಚಾರ ನನ್ನ ಆರೋಪವಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಈ ಆರೋಪ ಮಾಡಿದ್ದಾರೆ. ಪ್ರಧಾನಮಂತ್ರಿಗಳು ಈ ಪತ್ರಕ್ಕೆ ಇದುವರೆಗೂ ಯಾವುದೇ ಉತ್ತರ ನೀಡಿಲ್ಲ. ಅವರ ಮೌನ ಈ ಸರ್ಕಾರ 40% ಸರ್ಕಾರ ಎಂದು ಒಪ್ಪಿಕೊಂಡಂತಾಗಿದೆ. ರುಪ್ಸಾ ಸಂಸ್ಥೆ ಪತ್ರ, ಪಿಎಸ್ಐ ಹಗರಣ, ಸಹಾಯಕ ಪ್ರಾದ್ಯಪಕರು, ಇಂಜಿನಿಯರ್ ನೇಮಕಾತಿ ಅಕ್ರಮಗಳು ನಿಮ್ಮ ಕಣ್ಣ ಮುಂದೆ ಇವೆ ಎಂದು ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ನಾನು ಹಿಂದುಳಿದ ವರ್ಗಗಳಿಗೆ ಅಪಮಾನ ಮಾಡುತ್ತೇನೆ ಎಂದು ಸುಳ್ಳು ಹೇಳುತ್ತೇನೆ. ಹಿಂದುಳಿದವರು, ದಲಿತರ ಬಗ್ಗೆ ಮಾತನಾಡಿದರೆ ಅವರ ದೊಡ್ಡ ಸವಾಲು ಏನು? ಯಾರ ಜನಸಂಖ್ಯೆ ಹೆಚ್ಚಾಗಿದೆ? ಮೋದಿ ಅವರ ಸರ್ಕಾರದಲ್ಲಿರುವ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ನೋಡಿದರೆ ಕೇವಲ ಶೇ.7ರಷ್ಟು ಮಂದಿ ಮಾತ್ರ ದಲಿತರು, ಹಿಂದುಳಿದವರು, ಆದಿವಾಸಿಗಳು ಇದ್ದಾರೆ. ಭಾರತದಲ್ಲಿ ಎಷ್ಟು ಜನ ಓಬಿಸಿ, ದಲಿತರು, ಆದಿವಾಸಿಗಳಿದ್ದಾರೆ? ಸಂಪತ್ತು, ಅಧಿಕಾರ ಹಂಚಿಕೆ ವಿಚಾರ ಮಾತನಾಡುವುದಾದರೆ ಯಾರಿಗೆ ಹೆಚ್ಚಿನ ಪಾಲು ಸಿಗಬೇಕು. ನಿಮ್ಮ ಸರ್ಕಾರದಲ್ಲಿ ಕೇವಲ ಶೇ.7ರಷ್ಟು ಮಾತ್ರ ಒಬಿಸಿ ಹಾಗೂ ದಲಿತರು ಇರುವುದೇಕೆ ಎಂದು ಉತ್ತರಿಸಿ ಎಂದು ರಾಹುಲ್ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೋದಿ ಅವರು ಅದಾನಿಯಂತಹವರಿಗೆ ನೆರವು ನೀಡುತ್ತಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕದ ರೈತರು, ಕಾರ್ಮಿಕರು ಸಣ್ಣ ಉದ್ಯಮಿಗಳಿಗೆ ನರವು ನೀಡುತ್ತದೆ. ಮೋದಿ ಸರ್ಕಾರ ಕೋಟ್ಯಾಧಿಪತಿಗಳಿಗೆ ಮಾತ್ರ ಬ್ಯಾಂಕುಗಳ ಬಾಗಿಲನ್ನು ತೆಗೆದಿದ್ದು, ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗಾಗಿ ಬ್ಯಾಂಕುಗಳ ಬಾಗಿಲು ತೆಗೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರು, ಬಡವರು, ಕಾರ್ಮಿಕರ ಸರ್ಕಾರವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಒಟ್ಟಾಗಿ ಹೋರಾಟ ಮಾಡುತ್ತಿರುವುದು ಸಂತೋಷದ ವಿಚಾರ. ಕಾಂಗ್ರೆಸ್ ಪಕ್ಷ ಇಲ್ಲಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಬೇಕಾಗಿದೆ. ಒಂದು ಮಾತು ನೆನಪಿನಲ್ಲಿಡಿ. ಬಿಜೆಪಿ ಸರ್ಕಾರ 40% ಕಮಿಷನ್ ಹಣದಲ್ಲಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಾರೆ. ನಿಮ್ಮಿಂದ ಕದ್ದ ಹಣದಲ್ಲಿ ಸರ್ಕಾರ ಬೀಳಿಸಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಾರೆ. ಹೀಗಾಗಿ ನೀವು ಕನಿಷ್ಠ 150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು. ಆಗ ಬಿಜೆಪಿಗೆ ಭ್ರಷ್ಟಾಚಾರ ಮಾಡಲು ಅವಕಾಶ ತಪ್ಪಿಸಬಹುದು ಎಂದು ರಾಹುಲ್ ಗಾಂಧಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
‘ಮೇ10 ಮತದಾನದ ದಿನ ಮಾತ್ರವಲ್ಲ. ಭ್ರಷ್ಟ ಬಿಜೆಪಿ ಸರ್ಕಾರ ಬಡಿದೋಡಿಸುವ ದಿನ’
‘ಬಿಜೆಪಿಗೆ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇದ್ದರೆ ಶೇ.50 ಮೀಸಲಾತಿ ಮಿತಿಯನ್ನು ತೆರವುಗೊಳಿಸಲಿ’
‘ಸವದಿಗೆ ಏನು ಕಡಿಮೆ ಮಾಡಿದ್ವಿ..?, ಶೆಟ್ಟರ್‌ಗೆ ಇನ್ನೇನು ಮಾಡಬೇಕಿತ್ತು..?’