ದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ರಾಹುಲ್ ಗಾಂಧಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಬರೀ ಕಾಂಗ್ರೆಸ್ ಗೆಲುವಲ್ಲ, ಇದು ಕರ್ನಾಟಕ ರಾಜ್ಯದ ಜನರ ಗೆಲುವು ಎಂದಿದ್ದಾರೆ.
ನಾವು ಬಡವರ ಪರ ನಿಂತಿದ್ದೇವೆ. 5 ಗ್ಯಾರಂಟಿ ಘೋಷಣೆಗಳನ್ನ ನೀಡಿದ್ದೇವೆ. ಆ ಭರವಸೆಗಳನ್ನ ಕಲಾಪದ ಮೊದಲ ದಿನವೇ ಜಾರಿಗೆ ತರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೇ, ನಾನು ಕರ್ನಾಟಕದ ಜನತೆಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾವು ಕರ್ನಾಟಕದಲ್ಲಿ ದ್ವೇಷದಿಂದ ಗೆದ್ದಿಲ್ಲ, ಪ್ರೀತಿಯಿಂದ ಗೆದ್ದಿದ್ದೇವೆ. ಪ್ರೀತಿಯಿಂದಲೇ ನಾವು ದ್ವೇಷವನ್ನು ಕಿತ್ತು ಹಾಕಿದ್ದೇವೆ. ನಾವು ಗೆಲ್ಲಲು ಇನ್ನೊಂದು ಮುಖ್ಯವಾದ ಕಾರಣ ಅಂದ್ರೆ, ಬಡವರ ಮೇಲೆ ನಮಗೆ ಒಲವಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
LIVE: Media Interaction | New Delhi https://t.co/mflXxURASX
— Rahul Gandhi (@RahulGandhi) May 13, 2023
‘ಇದು ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದದ ವಿರುದ್ಧದ ಫಲಿತಾಂಶ’




