Monday, December 11, 2023

Latest Posts

ಸೇನಾ ಶ್ವಾನಗಳ ವ್ಯಂಗ್ಯ- ನೆಟ್ಟಿಗರಿಂದ ರಾಹುಲ್ ಗೆ ಛೀಮಾರಿ..!

- Advertisement -

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಟೀಕಿಸೋದನ್ನ ಸ್ಪಲ್ಪ ಮಟ್ಟಿಗೆ ಕಡಿಮೆ ಮಾಡಿಕೊಂಡಿದ್ದಾರೆ. ಆದ್ರೆ ಇದೀಗ ಸೇನಾ ಶ್ವಾನಗಳ ಯೋಗಾಭ್ಯಾಸದ ಕುರಿತು ಟೀಕೆ ಮಾಡೋ ಮೂಲಕ ತಾವೇ ಟೀಕೆಗೆ ಗುರಿಯಾಗಿದ್ದಾರೆ.

ಸದಾ ಒಂದಿಲ್ಲೊಂದು ಸಣ್ಣ ಪುಟ್ಟ ವಿಚಾರಗಳಿಗೆ ಭರ್ಜರಿ ಟೀಕೆಗೆ ಗುರಿಯಾಗೋ ರಾಹುಲ್ ಗಾಂಧಿ ಇದೀಗ ಮತ್ತೆ ತಮ್ಮ ಇದೇ ಸಣ್ಣ ತಪ್ಪಿನಿಂದಾಗಿ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿಶ್ವ ಯೋಗ ದಿನಾಚರಣೆಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಅಂತಯೇ ಯೋಗದ ಮಹತ್ವವನ್ನು ಸಾರಲಾರುತ್ತಿದೆ. ಆದ್ರೆ ಈ ಮಧ್ಯೆ ರಾಹುಲ್ ಗಾಂಧಿ ಮಾತ್ರ ಸೇನೆಯ ಶ್ವಾನ ಪಡೆಯೊಂದಿಗೆ ಯೋಧರ ಯೋಗಾಭ್ಯಾಸದ ಫೋಟೋ ಕುರಿತಾಗಿ ಲೇವಡಿ ಮಾಡಿದ್ದಾರೆ. ಈ ಫೋಟೋದಲ್ಲಿ ಸೇನಾ ಶ್ವಾನ ಪಡೆ ಯೋಗಾಸನದ ಭಂಗಿಗಳೊಂದಿಗೆ ಪೋಸ್ ನೀಡಿವೆ. ಹೀಗಾಗಿ ಯೋಗದ ಬಗ್ಗೆ ಅಷ್ಟೇನು ಒಲವು ತೊರದ ರಾಹುಲ್ ಗಾಂಧಿ ‘ಇದೇ ನವಭಾರತ’ ಅಂತ ವ್ಯಂಗ್ಯಾತ್ಮಕವಾಗಿ ಬರೆದುಕೊಂಡಿದ್ದಾರೆ.

ಆದ್ರೆ ರಾಹುಲ್ ಗಾಂಧಿಯವರ ಈ ಟ್ವೀಟ್ ನೆಟ್ಟಿಗರ ಪಿತ್ತ ನೆತ್ತಿಗೇರಿಸಿದೆ. ರಾಹುಲ್ ಗಾಂಧಿಯವರೇ ನೀವು ಯೋಗವನ್ನು ಕೀಳಾಗಿ ಕಾಣೋ ಜೊತೆಗೆ ಸೇನಾ ಪಡೆಯ ಶ್ವಾನಗಳನ್ನೂ ಟೀಕಿಸಿದ್ದೀರಿ. ವಿವೇಚನೆ ಇಲ್ಲದ್ದಕ್ಕೆ ನೀವು ಅಧಿಕಾರ ವಂಚಿತರಾಗಿದ್ದು ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳೋದಕ್ಕೂ ನಾಲಾಯಕ್ ಆಗಿದ್ದೀರಿ ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರ ಪ್ರತಿಕ್ರಿಯಿಸಿ, ‘ಈ ಫೋಟೋವನ್ನು ನೋಡಿ, ನಿಮಗಿಂತಲೂ ಹೆಚ್ಚು ಆ ಶ್ವಾನಗಳೇ ಆಕ್ವೀವ್ ಮತ್ತು ಸ್ಮಾರ್ಟ್ ಆಗಿವೆ.’ ಅಂತ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಈ ಒಂದೇ ಒಂದು ಟ್ವೀಟ್ ನಿಂದ ಅವರ ವಿವೇಚನೆಯನ್ನು ಇಡೀ ದೇಶವೇ ಪ್ರಶ್ನಿಸುವಂತಾಗಿದೆ.

ಈ ಬಾರಿ ಆಪರೇಷನ್ ಪಕ್ಕಾ..! ಜೂನ್ ನಲ್ಲಿ ಏನಾಗಲಿದೆ ಗೊತ್ತಾ?? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=BtV2M4P9tYs
- Advertisement -

Latest Posts

Don't Miss