National Political News: ಕಳೆದ ಚುನಾವಣೆಯಲ್ಲಿ ಭಾರತ್ ಜೋಡೋ ಯಾತ್ರೆ ಮಾಡಿ ಗಮನ ಸೆಳೆದಿದ್ದ ರಾಹುಲ್ ಗಾಂಧಿ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಲೋಕ ಸಭಾ ಚುನಾವಣೆ ಮುಂದಿದ್ದು, ಈ ಬಾರಿ ಊಾರತ್ ನ್ಯಾಯ ಯಾತ್ರೆ ಆಂರಭಿಸಲು ನಿರ್ಧರಿಸಿದ್ದಾರೆ. ಜನವರಿ 14ಕ್ಕೆ ಆ ಯಾತ್ರೆ ಶುರುವಾಗಲಿದ್ದು, ಮಾರ್ಚ್ 20ರಂದು ಮುಕ್ತಾಯಗೊಳ್ಳಲಿದೆ.
ಈ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ, ಹಲವು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಾಥ್ ನೀಡಲಿದ್ದು, 14 ರಾಜ್ಯ ಮತ್ತು 85 ಜಿಲ್ಲೆಗಳಲ್ಲಿ ಈ ಯಾತ್ರೆ ಸಾಗಲಿದೆ. ಮಣಿಪುರ, ನಾಗಾಲ್ಯಾಂಡ್, ಅಸ್ಸಾಮ್, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ್, ಮಧ್ಯಪ್ರದೇಶ್, ಉತ್ತರಪ್ರದೇಶ್, ಮೇಘಾಲಯ, ಪಶ್ಚಮಿ ಬಂಗಾಳ ಸೇರಿ ಇನ್ನೂ ಕೆಲ ರಾಜ್ಯಗಳಲ್ಲಿ ಭಾರತ್ ನ್ಯಾಯ ಯಾತ್ರೆ ಸಾಗಲಿದೆ.
ಕಳೆದ ಬಾರಿ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಶುರು ಮಾಡಿ, ಕಾಶ್ಮೀರದ ಶ್ರೀನಗರದಲ್ಲಿ ತಮ್ಮ ಯಾತ್ರೆಯನ್ನು ಕೊನೆಗೊಳಿಸಿದ್ದರು. ಇದು ಹಲವರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಬಾರಿ ರಾಹುಲ್ ಗಾಂಧಿಯ ಯಾತ್ರೆ ಮ್ಯಾಜಿಕ್ ಮಾಡತ್ತಾ ಕಾದು ನೋಡಬೇಕಿದೆ.
‘ಶಿವಾನಂದ ಪಾಟೀಲ್ ರೈತರ ಬಗ್ಗೆ ದುರುದ್ದೇಶದಿಂದ ಮಾತನಾಡಿಲ್ಲ, ಸಲುಗೆಯಿಂದ ಮಾತನಾಡಿದ್ದಾರೆ’
‘ಮಿಸ್ಟರ್ ನರೇಂದ್ರ ಮೋದಿ ಅವರೇ, ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ದೇಶದ ಜನರಿಗೆ ಲೆಕ್ಕ ಕೊಡಿ’