Sunday, September 8, 2024

Latest Posts

ರಾಯಚೂರು ಎಫ್ ಡಿಸಿ ಬೆಂಗಳೂರಲ್ಲಿ ಶವವಾಗಿ ಪತ್ತೆ…!

- Advertisement -

ಬೆಂಗಳೂರು- ಕಳೆದ 8 ದಿನಗಳ ಹಿಂದೆ ನಾಪತ್ತೆಯಾಗಿದ್ದ ರಾಯಚೂರು ಎಸಿ ಕಚೇರಿ ಸಿಬ್ಬಂದಿ ಇಂದು ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ನಿಗೂಢವಾಗಿ ನಾಪತ್ತೆಯಾಗಿದ್ದ ರಾಯಚೂರು ಎಸಿ ಕಚೇರಿಯ ಮೊದಲ ದರ್ಜೆ ಸಹಾಯಕ ಇಂದು ಬೆಂಗಳೂರಿನ ಲಾಡ್ಜ್ ವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಗಸ್ಟ್ 23 ರಂದು ಪ್ರಕಾಶ್ ಬಾಬು ನಾಪತ್ತೆಯಾಗಿದ್ರು. ಈ ಪ್ರಕರಣ ಕುರಿತಾಗಿ ಸಾಕಷ್ಟು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕಾಶ್ ಬಾಬು ಪತ್ತೆಗೆ ರಾಯಚೂರು ಎಸ್ಪಿ 2 ತನಿಖಾ ತಂಡಗಳನ್ನು ರಚಿಸಿದ್ರು. ಆದ್ರೆ 8 ದಿನಗಳ ನಂತರ ಅವರ ಶವ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹಿಂದೂಸ್ಥಾನ್ ಹೋಟೆಲ್ ನ ರೂಮ್ ನಲ್ಲಿ ಪತ್ತೆಯಾಗಿದೆ.

ಮೃತ ಪ್ರಕಾಶ್ ಬಾಬು ಆಡಿಟಿಂಗ್ ತಂಡ ಜಿಲ್ಲೆಗೆ ಭೇಟಿ ನೀಡುತ್ತೆ ಅನ್ನೋ ವಿಚಾರ ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ತಂಡ ಪ್ರಕಾಶ್ ಬಾಬುಗಾಗಿ ಶೋಧ ಕಾರ್ಯ ನಡೆಸಿತ್ತು.

- Advertisement -

Latest Posts

Don't Miss