Friday, December 13, 2024

Latest Posts

Raichur News: ಕಸ್ತೂರಿ ಬಾ ವಸತಿ ಶಾಲೆ ಮಕ್ಕಳು ಅಸ್ತವ್ಯಸ್ತ ಆಸ್ಪತ್ರೆಗೆ ದಾಖಲು

- Advertisement -

Raichuru News: ರಾಯಚೂರು,. ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಬರುವ ಆಲ್ಕೋಡ ಗ್ರಾಮದ ಸರ್ಕಾರಿ ಕಸ್ತೂರಿಬಾ ವಸತಿ ಶಾಲೆಯ ಮಕ್ಕಳು ಊಟ ಮಾಡಿದ ನಂತರ ಒಬ್ಬೊಬ್ಬರಾಗಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಾಲೂಕು ರೈತ ಸಂಘ ಅಧ್ಯಕ್ಷರಾದ ಮರಿಲಿಂಗ ಪಾಟೀಲ್ ಹೇಳಿದರು.

ಅವರಿಗೆ ಯಾರೋ ಒಬ್ಬ ವ್ಯಕ್ತಿ ಆಲ್ಕೋಡ್ ಕಸ್ತೂರಿಬಾ ವಸತಿ ಶಾಲೆಯ ಮಕ್ಕಳು ಊಟದಲ್ಲಿ ಏನು ಹಸ್ತವ್ಯಸ್ತವಾಗಿ ಮಕ್ಕಳು ವಾಂತಿಭೇದಿಯಿಂದ ಬಳಲುತ್ತಿದ್ದಾರೆ ಕೂಡಲೇ ನೀವು ಹಾಸ್ಪಿಟಲ್ಗೆ ಬನ್ನಿ ಎಂದು ಕರೆ ಮಾಡಿ ರೈತ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಅವರು ಆಸ್ಪತ್ರೆಗೆ ಆಗಮಿಸಿ. ಮೇಲೆ ಅಲ್ಲಿದ್ದ ಮಕ್ಕಳ ಆರೋಗ್ಯವನ್ನು ವಿಚಾರಿಸಿ. ಕೂಡಲೇ ಹಾಸ್ಪಿಟಲ್ ಡಾಕ್ಟರ್ ಗಳು ಭೇಟಿ ಮಾಡಿ ಮಕ್ಕಳ ಬಗ್ಗೆ ಮಾಹಿತಿ ಪಡೆದರು. ಈ ಒಂದು ಘಟನೆ ನಡೆದರು ಯಾವೊಬ್ಬ ಅಧಿಕಾರಿಯು. ತಾಲೂಕ ಆಸ್ಪತ್ರೆ ಕಡೆ ಬರದೇ ಇರೋದರಿಂದ ಆಕ್ರೋಶ ಭರಿತರಾದರು.

ಕೂಡಲೇ ತಾಲೂಕಿನ ತಹಶೀಲ್ದಾರ್ ಅವರಿಗೆ ಮತ್ತು ಡಿಡಿಪಿಗೆ ಮತ್ತು ಬಿಯೋಗೆ ಕರೆ ಮಾಡಿ ಕೂಡಲೇ ನೀವು ಆಸ್ಪತ್ರೆಗೆ ಭೇಟಿ ಕೊಡಿ ಎಂದು ಫೋನಿನ ಮುಖಾಂತರ ರೈತ ಸಂಘ ತಾಲೂಕ ಅಧ್ಯಕ್ಷರು ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ತಾಲೂಕು ಆಡಳಿತ ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಘಟನೆಯ ಬಗ್ಗೆ ವಿವರವನ್ನು ಪಡೆದರು. ಇದೇ ಸಂದರ್ಭದಲ್ಲ ರೈತ ಸಂಘದ ತಾಲೂಕು ಉಪಾಧ್ಯಕ್ಷರು ತಾಲೂಕು ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಯುವ ಅಧ್ಯಕ್ಷರು, ತಾಲೂಕ್ ಸಂಘಟನಾ ಕಾರ್ಯದರ್ಶಿ ಹಾಗೂ ಸಹ ಕಾರ್ಯದರ್ಶಿ ಇನ್ನು ಅನೇಕ ರೈತ ಸಂಘ ಸದಸ್ಯರು ಉಪಸ್ಥಿತರಿದ್ದರು.

- Advertisement -

Latest Posts

Don't Miss