Wednesday, December 11, 2024

Latest Posts

ಸೆಪ್ಟೆಂಬರ್ ನಲ್ಲಿ “ರಾಜ ರಾಣಿ ರೋರರ್ ರಾಕೆಟ್ “

- Advertisement -

ಬಿಡುಗಡೆಗೂ ಪೂರ್ವದಲ್ಲೇ ಭರ್ಜರಿಯಾಗಿ‌ ಮಾರಾಟವಾಗುತ್ತಿದೆ ಚಿತ್ರದ ಟಿಕೆಟ್

ಜನಪ್ರಿಯ “ಚುಟು ಚುಟು ಅಂತೈತಿ” ಹಾಡಿಗೆ ನೃತ್ಯ ನಿರ್ದೇಶನ ಮಾಡಿ, ಖ್ಯಾತರಾಗಿರುವ ನೃತ್ಯ ನಿರ್ದೇಶಕ ಭೂಷಣ್, ಆನಂತರ “ನಟಸಾರ್ವಭೌಮ”, ” ಬೆಲ್ ಬಾಟಮ್”, “ರಾಬರ್ಟ್” ಮುಂತಾದ ಸೂಪರ್ ಹಿಟ್ ಚಿತ್ರಗಳಿಗೂ‌ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

“ರಾಜ ರಾಣಿ ರೋರರ್ ರಾಕೆಟ್” ಚಿತ್ರದ ಮೂಲಕ ಭೂಷಣ್ ನಾಯಕರಾಗಿ ಮತ್ತೊಂದು ಮೆಟ್ಟಿಲು ಏರುವ ಉತ್ಸಾಹದಲ್ಲಿದ್ದಾರೆ . ಪ್ರಸ್ತುತ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಸೆಪ್ಟೆಂಬರ್ ನಲ್ಲಿ ತೆರೆ ಕಾಣಲಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕೆಂಪೇಗೌಡ ಮಾಗಡಿ ನಿರ್ದೇಶಿಸಿದ್ದಾರೆ. ನಾಗರಾಜ್ ವಿ ಅಜ್ಜಂಪುರ ನಿರ್ಮಾಣ ಮಾಡಿದ್ದಾರೆ. ಹುಲಿಯೂರು ದುರ್ಗದಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ.

ಮುಂದಿನ ತಿಂಗಳು ಚಿತ್ರ ತೆರೆಗೆ ಬರುತ್ತಿದ್ದು, ಚಿತ್ರತಂಡ ವಿನೂತನ ಪ್ರಚಾರಕ್ಕೆ ಮುಂದಾಗಿದೆ. ಇತ್ತೀಚೆಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕಾರ್ಯಕ್ಕೆ ಚಾಲನೆ ನೀಡಲಾಯಿತು. ಚಿತ್ರದ ಪಾಸ್(ಟಿಕೆಟ್) ಗಳನ್ನು ಈಗಲೇ ನೃತ್ಯಗಾರರಿಗೆ ವಿತರಿಸಲಾಗುತ್ತಿದೆ, ಆ ಕಾರ್ಯಕ್ಕೆ k g f ಖ್ಯಾತಿಯ ನೃತ್ಯ ನಿರ್ದೇಶಕ ಮೋಹನ್ ,dance Karnataka dance ಖ್ಯಾತಿಯ ರುದ್ರ, ಹಾಗೂ ಮತ್ತಿತರ ನೃತ್ಯಗಾರರು ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ ನಾಯಕ ಭೂಷಣ್.

ಇತ್ತೀಚೆಗೆ ಸಂಚಿತ್ ಹೆಗಡೆ ಹಾಡಿರುವ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ‌ಪ್ರಭು ಎಸ್ ಆರ್, ಸಂಗೀತ ನೀಡಿದ್ದಾರೆ.

ಭೂಷಣ್ ಅವರಿಗೆ ನಾಯಕಿಯಾಗಿ ಮಾನ್ಯ ಅಭಿನಯಿಸಿದ್ದಾರೆ. ರಣಧೀರ್, ಸಂತೋಷ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರಂ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

- Advertisement -

Latest Posts

Don't Miss