ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಫೋಟೋ ವೊಂದನ್ನು ಟ್ವೀಟ್ ಮಾಡಿ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ.
ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್, ತಮ್ಮ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಪುತ್ರನೊಂದಿಗೆ ಈಜುಕೊಳದಲ್ಲಿ ಕುಳಿತು ಪೋಸ್ ನೀಡಿದ್ದ ಫೋಟೋವನ್ನು ಶೇರ್ ಮಾಡಿದ್ದರು. ಆದ್ರೆ ಈಗಾಗಲೇ ತಮಿಳುನಾಡಿನ ಚೆನ್ನೈನಾದ್ಯಂತ ನೀರಿಗಾಗಿ ತೀವ್ರ ಹಾಹಾಕಾರ ಎದುರಾಗಿರೋ ಮಧ್ಯೆ ಸೌಂದರ್ಯಾರ ಈ ಫೋಟೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯ್ತು. ಚೆನ್ನೈ ಜನತೆ ನೀರಿಲ್ಲದೆ ಪರದಾಡುತ್ತಿರೋ ಸಂದರ್ಭದಲ್ಲಿ ಅತ್ಯಮೂಲ್ಯವಾದ ನೀರಿನಲ್ಲಿ ಮೋಜು ಮಸ್ತಿ ಮಾಡ್ತೀರಾ ಅಂತ ಟೀಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸೌಂದರ್ಯಾ ರಜನಿಕಾಂತಿ ತಾವು ಹಂಚಿಕೊಂಡಿದ್ದ ಫೋಟೋವನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಸ್ಪಷ್ಟನೆ ನೀಡಿರೋ ಆಕೆ-‘ ನನ್ನ ಪ್ರವಾಸದ ಆ ಫೋಟೋವನ್ನುಮನೋಭಾವದಿಂದ ನಾನು ಶೇರ್ ಮಾಡಿದ್ದೆ. ಸಣ್ಣ ಮಕ್ಕಳಲ್ಲಿ ದೈಹಿಕ ಚಟುವಟಿಕೆಗಳು ಎಷ್ಟು ಪ್ರಾಮುಖ್ಯತೆ ವಹಿಸುತ್ತೆ ಎಂಬುದರ ಕುರಿತಾಗಿ ಅದನ್ನು ಶೇರ್ ಮಾಡಿದ್ದೆ ಅಷ್ಟೆ. ಇದೀಗ ರಾಜ್ಯದಲ್ಲಿ ನೀರಿನ ಅಭಾವ ಎದುರಾಗಿದ್ದು ನಾವೆಲ್ಲರೂ ನೀರನ್ನು ಉಳಿಸೋಣ ‘ ಅಂತ ಟ್ವೀಟ್ ಮಾಡಿದ್ದಾರೆ.
ನಮಗೂ ಸುಮಲತಾಗೂ ಹೋಲಿಕೆ ಬೇಡ ಅಂತ ಉಪ್ಪಿ ಹೇಳಿದ್ದ್ಯಾಕೆ..?? ಮಿಸ್ ಮಾಡದೇ ಈ ವಿಡಿಯೋ ನೋಡಿ