Friday, December 5, 2025

Latest Posts

ರಜನಿ ಸರಳ ಜೀವನ – ಫ್ಯಾನ್ಸ್ ಮನ ಗೆದ್ದ ತಲೈವಾ!

- Advertisement -

ಸೂಪರ್ ಸ್ಟಾರ್ ರಜನಿಕಾಂತ್ 50 ವರ್ಷಗಳ ಸಿನಿಮಾ ಯಾತ್ರೆಯ ನಂತರ ಈಗ ಆಧ್ಯಾತ್ಮಿಕ ಪ್ರಯಾಣವನ್ನು ಆರಂಭಿಸಿದ್ದಾರೆ. ಪ್ರಖ್ಯಾತ ‘ತಲೈವಾ’ 74 ವರ್ಷ ವಯಸ್ಸಿನಲ್ಲಿದ್ದು, ಪ್ರಸ್ತುತ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿ, ಗಂಗಾ ಆರತಿಯಲ್ಲೂ ಭಾಗವಹಿಸಿದ್ದಾರೆ.

ಅವರು ಸರಳ ಉಡುಗೆ—ಬಿಳಿ ಕುರ್ತಾ ಮತ್ತು ಲುಂಗಿ ಧರಿಸಿ, ಬೀದಿ ಬದಿಯಲ್ಲೇ ಊಟ ಮಾಡಿದ್ದೂ, ಅವರ ಸರಳತೆ ಈಗ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ರಜನಿಕಾಂತ್ ಚಿತ್ರೋದ್ಯಮದಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ. ತಮ್ಮ ಆಧ್ಯಾತ್ಮಿಕ ಜೀವನದ ಮೂಲಕ ನೆಮ್ಮದಿಯ ಮತ್ತು ದೇವರ ಭಕ್ತಿಯಲ್ಲಿದ್ದಾರೆ.

ದಕ್ಷಿಣ ಭಾರತದ ಜೊತೆಗೆ ಬಾಲಿವುಡ್‌ ಚಿತ್ರರಂಗದಲ್ಲೂ ತಮ್ಮ ಒಲಿಕೆಯನ್ನು ತೋರಿಸಿರುವ ಈ ಸೂಪರ್ ಸ್ಟಾರ್‌ ಸೋಶಿಯಲ್ ಮೀಡಿಯಾದಲ್ಲಿ ಸ್ವಲ್ಫ ಮಟ್ಟಿಗೆ ಸಕ್ರಿಯರಾಗಿದ್ದರೂ ಕೂಡ ತಮ್ಮ ಫೋಟೋಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ರಜನಿಕಾಂತ್ ಅವರ ಆಧ್ಯಾತ್ಮಿಕ ಪ್ರಯಾಣವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅವರು ತಮ್ಮ ಜೀವನದಲ್ಲಿ ನಿಜವಾದ ಶಾಂತಿ ಹಾಗೂ ಸದುಪಯೋಗ ಕಂಡುಕೊಳ್ಳಲು ಮುಂದಾಗಿದ್ದಾರೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಪ್ರಪಂಚದಾದ್ಯಂತ ಅವರ ಅಭಿಮಾನಿಗಳು ಇದ್ದಾರೆ ಮತ್ತು ಇವರ ಸರಳತೆ ಹಾಗೂ ಭಕ್ತಿ ಇತ್ತೀಚಿಗೆ ಎಲ್ಲರಿಗೂ ಪ್ರೇರಣೆಯಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss