Political News: ರಾಜ್ಯಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಫಲಿತಾಂಶ ಪ್ರಕಟವಾಗಿದೆ. ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಸೋಲಾಗಿದ್ದು, ಕಾಂಗ್ರೆಸ್ 3 ಸ್ಥಾನವನ್ನು ಗೆದ್ದಿದೆ. ಬಿಜೆಪಿ 1 ಸ್ಥಾನವನ್ನು ಗೆದ್ದಿದೆ.
ಕಾಂಗ್ರೆಸ್‌ನ ಅಜಯ್ ಮಾಕೇನ್, ನಾಸಿರ್ ಹುಸೇನ್, ಚಂದ್ರಶೇಖರ್ ಗೆಲುವು ಸಾಧಿಸಿದ್ದಾರೆ, ಬಿಜೆಪಿಯಿಂದ ನಾರಾಯಣ ಸಾ ಭಾಂಡಗೆ 47 ಮತ ಪಡೆದು ಗೆದ್ದಿದ್ದಾರೆ. ಕುಪೇಂದ್ರ ರೆಡ್ಡಿಗೆ 35 ಮತಗಳು ಬಿದ್ದಿದ್ದು, ಮೈತ್ರಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ಜೆಡಿಎಸ್‌ನಿಂದ 19 ಮತಗಳು ಮತ್ತು ಬಿಜೆಪಿಯಿಂದ 16 ಮತ ಬಿದ್ದ ಪರಿಣಾಮ ಕುಪೇಂದ್ರ ರೆಡ್ಡಿಗೆ ಸೋಲಾಗಿದೆ.
ಜೆಡಿಎಸ್, ಬಿಜೆಪಿ ರಣತಂತ್ರದ ಬಗ್ಗೆ ಆಕ್ರೋಶ ಹೊರಹಾಕಿದ್ದ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ಗೆ ಗೆಲ್ಲಲು 45 ಮತಗಳ ಅಗತ್ಯವಿದೆ. ಅಷ್ಟು ಸಂಖ್ಯೆಯ ಮತಗಳು ಅವರ ಬಳಿ ಇದೆಯೇ? ಮತವಿಲ್ಲದಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸಿ ನಮ್ಮ ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಅವರಿಗೆ ಆತ್ಮಸಾಕ್ಷಿ ಇದೆಯೇ? ನಮ್ಮವರಿಗೆ ಬೆದರಿಕೆ ಹಾಕಿರುವುದಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ಹಾಕಲಾಗಿದೆ. ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಈ ಬಗ್ಗೆ ಯಾವ ಅನುಮಾನವಿಲ್ಲ ಎಂದು ಭವಿಷ್ಯ ನುಡಿದಿದ್ದರು. ಇದೀಗ ಆ ಭವಿಷ್ಯವೇ ನಿಜವಾಗಿದೆ.