ಹುಬ್ಬಳ್ಳಿ : ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗೆಲ್ಲಲಿದೆ. ಜೆಡಿಎಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ರಾಜ್ಯಸಭೆ ಚುನಾವಣೆ ಸಂಬಂಧಿಸಿದ ನಾನು ಯಾವುದೇ ಕಾಂಗ್ರೆಸ್ ನಾಯಕರ ಜೊತೆಗೆ ಚರ್ಚೆ ನಡೆಸಿಲ್ಲ.
ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ನನ್ನ ಆರೋಗ್ಯದ ತಪಾಸಣೆಗೆ ಸಿಂಗಾಪುರಕ್ಕೆ ಹೋಗಿದ್ದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರು ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ನಮ್ಮ ಪಕ್ಷದಲ್ಲಿ 32 ಶಾಸಕರಿದ್ದಾರೆ. ಕೆಲವರು ಅಸಮಾಧಾನಗೊಂಡಿದ್ದು ನಿಜ. ಆದರೆ ಯಾವುದೇ ಅಸಮಾಧಾನವಿದ್ದರೂ ಜೆಡಿಎಸ್ ವಿರುದ್ಧ ಮತಹಾಕಲ್ಲ. ಈ ಹಿಂದೆ ಅಡ್ಡ ಮತದಾನ ಮಾಡಿದಂತೆ ಈ ಬಾರಿ ಅಂತಹ ಪ್ರಯತ್ನ ನಡೆಯಲ್ಲ.
ಬಿಜೆಪಿ 2, ಕಾಂಗ್ರೆಸ್ ಓರ್ವ ಅಭ್ಯರ್ಥಿ ನಿರಾಸಯವಾಗಿ ಗೆಲ್ಲಲಿದ್ದಾರೆ. ಬಿಜೆಪಿ 2 ಅಭ್ಯರ್ಥಿಗಳು ಆಯ್ಕೆಯಾದರೆ 32 ಮತಗಳು ಉಳಿಯುತ್ತವೆ. ನಮ್ಮಲ್ಲೂ 32 ಮತಗಳು ಉಳಿಯುತ್ತವೆ. 2 ನೇ ಪ್ರಾಶ್ಯಸ್ತದ ಮತಗಳಲ್ಲಿ ಜೆಡಿಎಸ್ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು