- Advertisement -
Spiritual: ಖ್ಯಾತ ಜ್ಯೋತಿಷಿ ಮತ್ತು ಆಧ್ಯಾತ್ಮಿಕ ಸಲಹೆಗಾರರು ಆಗಿರುವ ಚಂದಾ ಪಾಂಡೆ ಅಮ್ಮಾಜಿ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ರಕ್ಷಾ ಬಂಧನ ಹಬ್ಬದ ಬಗ್ಗೆ ವಿವರಿಸಿದ್ದಾರೆ.
ರಾಖಿ ಕಟ್ಟುವುದಾದರೆ, ಸಹೋದರಿಯಾದವಳು ಸಹೋದರನ ಮನೆಗೆ ಹೋಗಿ, ನೆಲದ ಮೇಲೆ ಪದ್ಮ ರಂಗೋಲಿ ಹಾಕಿ. ಅದರ ಮೇಲೆ ಮಣೆ ಇರಿಸಿ, ಅದರ ಮೇಲೆ ಸಹೋದರನನ್ನು ಕೂರಿಸಿ, ಗಂಧ ಕುಂಕುಮ, ಅಕ್ಷತೆಯನ್ನು ಹಣೆಗೆ ಹಚ್ಚಿ, ಆರತಿ ಬೆಳಗಿ, ರಾಖಿ ಕಟ್ಟಿ, ಸಿಹಿ ತಿನ್ನಿಸಬೇಕು. ಇದು ರಕ್ಷಾ ಬಂಧನ ಆಚರಿಸುವ ಪದ್ಧತಿ.
ಆದರೆ ಕೆಲವರು ಆಫೀಸಿನಲ್ಲಿ, ರಸ್ತೆಯಲ್ಲಿ ಹೀಗೆ ಎಲ್ಲಿ ಬೇಕೋ ಅಲ್ಲಿ ಕಟ್ಟಿಬಿಡುತ್ತಾರೆ. ಹೀಗೆ ಆಚರಿಸಬಾರದು ಅಂತಾರೆ ಖ್ಯಾತ ಜ್ಯೋತಿಷಿ ಚಂದಾ ಪಾಂಡೆ ಅಮ್ಮಾಜಿ. ಅಲ್ಲದೇ ಈ ದಿನ ಜನಿವಾರ ಬದಲಿಸಿಕ“ಳ್ಳುವ ಪದ್ಧತಿ ಇದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.
- Advertisement -