Friday, March 14, 2025

Latest Posts

ಮೇ 16ಕ್ಕೆ ರಕ್ಷಿತ್ ಶೆಟ್ಟಿ ತಮ್ಮ ಫ್ಯಾನ್ಸ್ ಗೆ ಸಿಹಿ ಸುದ್ದಿ ಕೊಡಲಿದ್ದಾರೆ.!

- Advertisement -

ಕಿರಣ್ ರಾಜ್ ಕೆ ನಿರ್ದೇಶನ ಮತ್ತು ರಕ್ಷಿತ್ ಶೆಟ್ಟಿ ನಟನೆಯ, ‘777 ಚಾರ್ಲಿ’ ಸಿನಿಮಾದ ಟ್ರೇಲರ್ ಬಿಡುಗಡೆಯನ್ನ ಚಿತ್ರತಂಡ ನಿಗಧಿಪಡಿಸಿದೆ. ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್-2 ಚಿತ್ರದ ನಂತರ ‘777 ಚಾರ್ಲಿ’ ಕನ್ನಡ ಸಿನಿಮಾ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತಯಾರಾಗಿದೆ.

ರಕ್ಷಿತ್ ಶೆಟ್ಟಿ ನಟನೆಯ ‘ಪರಮ್‌ವಾ ಸ್ಟುಡಿಯೋಸ್ ನಿರ್ಮಾಣದ ‘777 ಚಾರ್ಲಿ’ ಸಿನಿಮಾದ ಟ್ರೇಲರ್ ಅನ್ನು ಮೇ 16ರಂದು ಮಧ್ಯಾಹ್ನ 12.12ಕ್ಕೆ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಈ ಸಿನಿಮಾದ ಟ್ರೇಲರ್‌ ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

‘777 ಚಾರ್ಲಿ’ ಸಿನಿಮಾವು ಇದೆ ಜೂನ್‌ 10ಕ್ಕೆ ತೆರೆಯ ಮೇಲೆ ಬರಲು ಸಜ್ಜಾಗಿದ್ದು, ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಈ ಸಿನಿಮಾ ಈಗಾಗಲೇ ಬೇರೆ ಬೇರೆ ಭಾಷೆಯ ಆಡಿಯೆನ್ಸ್‌ ಗಮನವನ್ನೂ ಕೂಡ ಸೆಳೆದಿದೆ. ಅದಷ್ಟೇ ಅಲ್ಲದೆ ತೆಲುಗಿನಲ್ಲಿ ನಟ ರಾಣಾ ದಗ್ಗುಬಾಟಿ, ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು, ಮಲಯಾಳಂನಲ್ಲಿ ನಟ, ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ಈ ಚಿತ್ರದ ವಿತರಣೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅದೇ ರೀತಿ ಹಿಂದಿಯಲ್ಲಿ ಖ್ಯಾತ ಸಂಸ್ಥೆ ಯೂಎಫ್‌ಒ ಈ ಸಿನಿಮಾವನ್ನು ವಿತರಣೆ ಮಾಡಲಿದೆ.

ಇನ್ನು ಈ ಸಿನಿಮಾ ಶ್ವಾನದ ಹಿನ್ನೆಲೆಯಲ್ಲಿ ಸಾಗುತ್ತಿದ್ದು, ಈ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ನಾಯಕರಾಗಿ ನಟಿಸಿದರೆ, ರಾಜ್‌ ಬಿ ಶೆಟ್ಟಿ, ದಾನಿಶ್‌ ಸೇಠ್‌, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ಸೇರಿ ಹಲವರು ನಟಿಸಿದ್ದಾರೆ. ಈ ಚಿತ್ರವನ್ನು ಕಿರಣ್‌ ರಾಜ್‌ ನಿರ್ದೇಶಿಸಿದ್ದು, ನೋಬಿನ್‌ ಪೌಲ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ. ಇನ್ನು ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ ಮಾಡಿದ್ದು, ಪ್ರತೀಕ್‌ ಶೆಟ್ಟಿ ಸಂಕಲನ ಹಾಗೂ ಪ್ರಗತಿ ರಿಷಬ್‌ ಶೆಟ್ಟಿ ಅವರು ವಸ್ತ್ರ ವಿನ್ಯಾಸ ಮಾಡಿದ್ದಾರೆ. ಹಾಗೂ ವಿಕ್ರಮ್‌ ಮೋರ್‌ ಅವರ ಸಾಹಸ ಈ ಸಿನಿಮಾಗಿದೆ.

ಎಂದಿನಂತೆ ನಿಮ್ಮೆಲ್ಲರ ಪ್ರೀತಿ, ಬೆಂಬಲವಿರಲಿ ಎಂದು ಚಿತ್ರತಂಡ ಪ್ರೇಕ್ಷಕರಲ್ಲಿ ಕೇಳಿಕೊಂಡಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

- Advertisement -

Latest Posts

Don't Miss