Friday, November 22, 2024

Latest Posts

ರಾಮ ಮತ್ತು ರಾಮರಾಜ್ಯ ಎನ್ನುವುದೇ ಕಾಂಗ್ರೆಸ್‌ನವರಿಗೆ ಕಂಟಕ: ಸಿ.ಸಿ.ಪಾಟೀಲ್

- Advertisement -

Gadag News: ಗದಗ: ಗದಗದಲ್ಲಿ ಮಾಜಿ ಸಚಿವ ನರಗುಂದ ಶಾಸಕ ಸಿ.ಸಿ.ಪಾಟೀಲ್ ಮಾತನಾಡಿದ್ದು, ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ.

ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸಚಿವ ಸಿಸಿ ಪಾಟೀಲ್, ರಾಮನಗರ ಜಿಲ್ಲೆ ಪಾರಂಪರಿಕವಾಗಿ ತನ್ನದೇ ಆದ ಹೆಸರು ಉಳಿಸಿಕೊಂಡು ಬಂದಿತ್ತು. ರಾಮನಗರ ಗೌರವಾನ್ವಿತ ಶಬ್ಧ ಆಗಿತ್ತು. ಬೆಂಗಳೂರು ಸಾಕಷ್ಟು ವಿಸ್ತಾರವಾಗಿದೆ, ಬೆಂಗಳೂರು ದಕ್ಷಿಣ ಎಂಬ ಹೆಸರು ಕೊಡುವ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ಎಂಬುದು ದೊಡ್ಡ ಮದ ತಂದಿದೆ. 136 ಶಾಸಕರು ಇದ್ದೆವೆ ಎಂಬುದು ದೊಡ್ಡ ಮದ ಬಂದಿದೆ. ಭಸ್ಮಾಸುರನ‌ ಲೆಕ್ಕಕ್ಕೆ ಇದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಮನಗರ ಜಿಲ್ಲೆ ರಾಜಕೀಯ ಸ್ವರೂಪ ಪಡೆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ನಿಂದ ಕುಮಾರಸ್ವಾಮಿ ಅವರು ಪ್ರಬಲರಿದ್ದಾರೆ. ಕಾಂಗ್ರೆಸ್ ನಿಂದ ಡಿಕೆಶಿ ಅವರು ಪ್ರಬಲರಿದ್ದಾರೆ. ರಾಜಕೀಯವಾಗಿ ಜಿದ್ದಾಜಿದ್ದಿನ ಕ್ಷೇತ್ರ ಆಗುವುದರಲ್ಲಿ ಎರಡು ಮಾತಿಲ್ಲ. ರಾಮ ಮತ್ತು ರಾಮ ರಾಜ್ಯ ಎಂಬುದೇ ಕಾಂಗ್ರೆಸ್ ನವರಿಗೆ ಕಂಟಕ. ರಾಮ ಅಷ್ಟೇ ಅಲ್ಲ ರಾಮ ರಾಜ್ಯ ಆಗುವುದು ಕಾಂಗ್ರೆಸ್ ನವರಿಗೆ ಬೇಡವಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.

ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲ್, ಮೀಸಲಾತಿ 2D ಸಂಬಂಧ ನಾನು, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ ಯತ್ನಾಳ ಅಲ್ಪಕಾಲ ಚರ್ಚೆಗೆ ಅವಕಾಶ ಕೇಳಿದ್ದೆವು. ವಿಧಾನಸಭೆ ಸ್ಪೀಕರ್ ಚರ್ಚೆಗೆ ಅವಕಾಶ ಕೊಡಲಿಲ್ಲ. ವಿಧಾನ ಸಭೆ ಸಭಾಪತಿ ಅವರು ಈ ಅಧಿವೇಶನದಲ್ಲಿ ಏಕಪಕ್ಷೀಯವಾಗಿ ಕಾಂಗ್ರೆಸ್ ಪರವಾಗಿ ಪಡೆದುಕೊಂಡಿದ್ದು ಎದ್ದು ಕಾಣುವಂತಿತ್ತು ಎಂದು ಪಾಟೀಲ್ ಹೇೇಳಿದ್ದಾರೆ.

- Advertisement -

Latest Posts

Don't Miss