Patna Political News: ನನ್ನ ಕನಸಿನಲ್ಲಿ ಬಂದ ರಾಮ, ನಾನು ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದಿದ್ದಾನೆ ಎಂದು, ಬಿಹಾರ ಸಚಿವ ಲಾಲೂಪ್ರಸಾದ್ ಯಾದವ್ ಹಿರಿಯ ಮಗ, ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ಈ ಹೇಳಿಕೆ ಸಖತ್ ವೈರಲ್ ಆಗಿದ್ದು, ಪರ ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ತೇಜ್ ಪ್ರತಾಪ್ ಯಾದವ್, ಬಿಜೆಪಿಯ ಬಗ್ಗೆ ತಮಾಷೆ ಮಾಡಿದ್ದಾರೆ. ಇದೆಲ್ಲ ಚುನಾವಣೆವರೆಗೂ ಮಾತ್ರ. ಬಳಿಕ ಈ ಬಗ್ಗೆ ಯಾರೂ ಮಾತಾಡುವುದಿಲ್ಲ. ಜನವರಿ 22ನೇ ತಾರೀಖಿನಂದೇ ರಾಮ ಅಯೋಧ್ಯೆಗೆ ಏಕೆ ಬರಬೇಕು. ಮತ್ತು ರಾಮ ಅಂದು ಅಯೋಧ್ಯೆಗೆ ಬರುವುದಿಲ್ಲ. ಏಕೆಂದರೆ ಅವನು ನನ್ನ ಕನಸಿನಲ್ಲಿ ಬಂದು, ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಹಾಗಾಗಿ ನಾನು ಅಯೋಧ್ಯೆಗೆ ಬರುತ್ತಿಲ್ಲವೆಂದು ಹೇಳಿದ್ದಾನೆ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ತೇಜ್ ಪ್ರತಾಪ್ ಕನಸಿನದ್ದೇ ಮಾತು.
ಪೂಜಿಸಲೆಂದೇ ಹೂಗಳ ತಂದೆ ಹಾಡು ಮತ್ತು ಹಾಡುಗಾರ್ತಿಯನ್ನು ಮೆಚ್ಚಿ ಹೊಗಳಿದ ಮೋದಿ..
ಕನಸಲ್ಲಿ ರಾಮ ಕಂಡನೆಂದು ಅಯೋಧ್ಯೆಗೆ ಪಾದಯಾತ್ರೆ ಹೊರಟ ಮುಸ್ಲಿಂ ಮಹಿಳೆ..


