Thursday, December 12, 2024

Latest Posts

Ramayana: ಲಂಕಾಧಿಪತಿ ರಾವಣ ಸೀತೆಯನ್ನು ಮುಟ್ಟದಿರಲು ಕಾರಣವೇನು ಗೊತ್ತಾ..?

- Advertisement -

Ramayana: ಇಂದಿನ ಕಾಲದ ಕೆಲ ಯುವ ಪೀಳಿಗೆಯವರು ರಾವಣನನ್ನು ಕುರಿತು ಮಾತನಾಡುವುದೇನೆಂದರೆ, ರಾವಣ ಸೀತೆಯನ್ನು ಅಪಹರಿಸಿದ್ದ. ಆದರೆ ಆಕೆಯನ್ನು ಮುಟ್ಟಿರಲಿಲ್ಲ. ಆತ ಭಾರೀ ಉತ್ತಮನಾಗಿದ್ದ ಎಂದು. ಆದರೆ ಸತ್ಯವೇ ಬೇರೆ. ಆತ ಜಾತಿಯಲ್ಲಿ ಬ್ರಾಹ್ಮಣನಾಗಿದ್ದು, ಸಕಲ ಕಲಾ ವಲ್ಲಭನಾಗಿದ್ದ. ಆತನಿಗೆ ಶಸ್ತ್ರ ವಿದ್ಯೆಯಿಂದ ಹಿಡಿದು, ಶಾಸ್ತ್ರ ವಿದ್ಯೆಯ ತನಕ ಎಲ್ಲವೂ ಗೊತ್ತಿತ್ತು. ಆದರೆ ಆತ ರಾಕ್ಷಸ ಪ್ರವೃತ್ತಿಯವನಾಗಿದ್ದ ಕಾರಣ, ಆತ ಮಹಿಳೆಯರಿಗೆ ಗೌರವಿಸುತ್ತಿರಲಿಲ್ಲ. ಹಿರಿಯರನ್ನು, ಋಷಿ ಮುನಿಗಳನ್ನು ಗೌರವಿಸುತ್ತಿರಲಿಲ್ಲ. ಸಂಬಂಧಕ್ಕೆ ಬೆಲೆ ಕೊಡುತ್ತಿರಲಿಲ್ಲ.

ಆತ ಸೀತೆಯನ್ನು ಮುಟ್ಟದೇ ಇರಲು ಬೇರೆಯ ಕಾರಣವಿತ್ತು. ಅದೇನೆಂದರೆ, ಈ ಮೊದಲು ರಾವಣ ಸಂಬಂಧದಲ್ಲಿ ತನ್ನ ಸೊಸೆಯಾಗಬೇಕಿದ್ದ ರಂಭಾಳ ಮೇಲೆ ತನ್ನ ಕೆಟ್ಟ ಕಣ್ಣು ಹಾಕಿದ್ದ. ನಳಕುಬೇರನ ಪತ್ನಿಯಾಗಿದ್ದ ರಂಭೆ ಏಕಾಂತದಲ್ಲಿ ಇದ್ದಾಗ, ಆಕೆಯ ಮಾನಭಂಗ ಮಾಡಲು ಮುಂದಾಗಿದ್ದ ರಾವಣನನ್ನು, ರಂಭೆ ಹಲವು ಬಾರಿ ಈ ರೀತಿ ಮಾಡಬೇಡಿ ಎಂದು ಬೇಡಿಕೊಂಡಳು. ಆದರೂ ಬಿಡದ ರಾವಣ ಆಕೆಯ ಮಾನಭಂಗ ಮಾಡಿದ.

ಸ್ಥಳಕ್ಕೆ ಧಾವಿಸಿದ ನಳಕುಬೇರ, ಅಹಂಕಾರದಿಂದ ಓರ್ವ ಸ್ತ್ರೀಯ ಮಾನಹರಣ ಮಾಡಿದ ಫಲವಾಗಿ, ನೀನು ಇನ್ನು ಮುಂದೆ ಅನುಮತಿ ಇಲ್ಲದೇ, ಯಾವ ಸ್ತ್ರೀಯ ದೇಹ ಸ್ಪರ್ಶ ಮಾಡಿದರೂ ಕೂಡ, ನಿಮ್ಮ ದೇಹ ತುಂಡು ತುಂಡಾಗಿ ಹೋಗುತ್ತದೆ ಎಂದು ರಂಭೆಯ ಪತಿ ನಳಕುಬೇರ ರಾವಣನಿಗೆ ಶಾಪ ನೀಡಿದ್ದ. ಈ ಕಾರಣಕ್ಕೆ ರಾವಣ ಸೀತೆಯನ್ನು ಸ್ಪರ್ಶಿಸಿರಲಿಲ್ಲ. ಹಾಗೇನಾದರೂ ರಾವಣ ಸೀತೆಯನ್ನು ಸ್ಪರ್ಶಿಸಿದಿದ್ದರೆ, ಆತ ಆ ಕ್ಷಣವೇ ಸಾವಿರ ತುಂಡಾಗಿ ಹೋಗುತ್ತಿದ್ದ.

- Advertisement -

Latest Posts

Don't Miss