Sunday, April 13, 2025

Latest Posts

ಚುನಾವಣೆ ಮೊದಲು ರಮೇಶ್ ಜಾರಕಿಹೊಳಿ ಡಿಕೆಶಿ ಕಾಲು ಹಿಡಿಯಲು ಬಂದಿದ್ದರು. ರವಿ ಗಣಿಗ..!

- Advertisement -

ಮಂಡ್ಯ : ರಾಜಕೀಯವಾಗಿ ಡಿ.ಕೆ.ಶಿವಕುಮಾರ್ ಮುಗಿಸಲು ಯತ್ನಿಸುತ್ತಿದ್ದಾರೆ. ಈ ಸಂಬಂಧ ರಮೇಶ್ ಜಾರಕಿಹೊಳಿ ಮತ್ತು ಹಳೇ ಮೈಸೂರು ಭಾಗದ ಟೀಂ ಕೆಲಸ ಮಾಡುತ್ತಿದೆ. ಚುನಾವಣಾ ಪೂರ್ವದಲ್ಲಿ ಡಿ.ಕೆ.ಶಿವಕುಮಾರ್ ಅವರ ಕೈ-ಕಾಲು ಹಿಡಿಯಲು ರಮೇಶ್ ಜಾರಕಿಹೊಳಿ ಬಂದಿದ್ದರು ಎಂದು ಹೇಳಿದರು.

ಕಾಲು ಹಿಡಿಯಲು ಬಂದಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ರಮೇಶ್ ಜಾರಕಿಹೊಳಿ ಅಧಿಕಾರ ಕಳೆದುಕೊಂಡು ಹುಚ್ಚನಂತಾಡುತ್ತಿದ್ದಾನೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕ ರವಿ ಗಣಿಗ ಏಕವಚನದಲ್ಲಿ ವಾಗ್ದಾಳಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಒಕ್ಕಲಿಗರ ನಾಯಕತ್ವ ಮುಗಿಸಲು ಹೊರಟಿದ್ದಾರೆ. 100 ಜನ ರಮೇಶ್ ಜಾರಕಿಹೊಳಿ ಬಂದರೂ ಡಿಕೆ ಶಿವಕುಮಾರ್ ಅವರನ್ನು ಟಚ್ ಮಾಡಲು ಆಗಲ್ಲ. 7 ಜನ್ಮ ಎತ್ತಿದರೂ ಡಿ.ಕೆ.ಶಿವಕುಮಾರ್ರನ್ನು ಮತ್ತೆ ಜೈಲಿಗೆ ಕಳಿಸಲು ಆಗಲ್ಲ ಎಂದರು.

ಡಿಕೆ ಶಿವಕುಮಾರ್ ಸಿಡಿ ಮಾಸ್ಟರ್ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಬೆಡ್ ಮೇಲೆ ನಾವು ಮಲಗಲು ಹೋಗಿದ್ವಾ?. ಸಿಡಿ ಮಾಡಿದವನು ಯಾರೋ, ತೋರಿಸಿರೋನು ಯಾರೋ. ಹೀಗೆ ಮಾತನಾಡಿ ಮಾತನಾಡಿಯೇ ಅವರು ಮಾಜಿ ಆಗಿರುವುದು, ನಾವು ಅಧಿಕಾರಕ್ಕೆ ಬಂದಿರುವುದು. ಇದನ್ನೆಲ್ಲ ಬಿಟ್ಟು ರಾಜ್ಯದಲ್ಲಿ ಬರ ಇದೆ, ಜನರ ಬಳಿಗೆ ಹೋಗಬೇಕು. ಅದನ್ನು ಬಿಟ್ಟು ಡಿಸಿಎಂ ಅವರನ್ನು ಜೈಲಿಗೆ ಕಳುಹಿಸುತ್ತೇನೆ, ಅವರನ್ನ ಮಾಜಿ ಮಾಡುತ್ತೇನೆ ಅನ್ನುವುದನ್ನು ಬಿಡಬೇಕು. ಹುಚ್ಚರಂತೆ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಶಾಸಕರಲ್ಲಿ ಯಾವುದೇ ಅಸಮಾದಾನವಿಲ್ಲ. 137 ಜನ ಶಾಸಕರು ಎಲ್ಲರ ಜೊತೆ ಇದ್ದೇವೆ. ನಾವೆಲ್ಲ ಸಂತೋಷವಾಗಿದ್ದೇವೆ. ವಿರೋಧ ಪಕ್ಷದವರಿಗೆ ಅಧಿಕಾರವಿಲ್ಲ, ಇದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಪ್ರತಿದಿನ ಒಂದೊಂದು ಏನೇನೊ ಹೇಳುತ್ತಿದ್ದಾರೆ ಎಂದರು.

ಜಗದೀಶ್ ಶೆಟ್ಟರ್ ಗೆ ಸನ್ಮಾನ ಮಾಡ್ತಾರಂತೆ ಮಹೇಶ್ ಟೆಂಗಿನಕಾಯಿ; ಯಾಕೆ ?

ಜೀನಿ ಜೀವನಕ್ಕೆ ಹೊಸ ಹುರುಪನ್ನು ಕೊಟ್ಟಿದೆ: ಇದು Jeeni ಸೇವಿಸಿದವರ ಮಾತು

ಸಿಡಿ ಮಾಸ್ಟರ್ ಡಿಕೆಶಿ ಪುಕ್ಕಲ, ಮೋಸಗಾರ; ಈ ಕಾರಣಕ್ಕೆ ಸರ್ಕಾರ ಪತನ ಆಗುತ್ತೆ ಎಂದ ಸಾಹುಕಾರ್

- Advertisement -

Latest Posts

Don't Miss