Sunday, December 22, 2024

Latest Posts

ಮತ್ತೆ ರಾಜಕೀಯಕ್ಕೆ ಬರುವ ಬಗ್ಗೆ ರಮ್ಯಾ ಹೇಳಿದ್ದೇನು..?

- Advertisement -

ಮಂಡ್ಯ: ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಮಾಜಿ ಸಂಸದೆ ರಮ್ಯಾ, ನಮ್ಮ ಅಭ್ಯರ್ಥಿಯಾದ ಗಣಿಗ ರವಿಕುಮಾರ್‌ಗೆ ನಿಮ್ಮ ಮತ ನೀಡಿ ಎಂದು ಕೇಳಿಕೊಂಡರು.

ಇದಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಮ್ಯಾ, ಅವರು ಕೇಳಿದ ಎಲ್ಲಾ ಪ್ರಶ್ನೆಗೂ ಉತ್ತರ ನೀಡಿದರು. ತುಂಬಾ ವರ್ಷಗಳ ಬಳಿಕ ನೀವು ಮಂಡ್ಯಕ್ಕೆ ಬಂದಿದ್ದೀರಿ. ಹೇಗನ್ನಿಸುತ್ತಿದೆ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದ್ದಕ್ಕೆ, ಉತ್ತರಿಸಿದ ರಮ್ಯಾ, ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದು ಇವತ್ತು ಎಂದು ನೀವು ಆ ಪ್ರಶ್ನೆ ಕೇಳುತ್ತಿದ್ದೀರಿ. ಆದರೆ ನಾನು ಆಗಾಗ ಮಂಡ್ಯಕ್ಕೆ ಬಂದು ಹೋಗುತ್ತಿರುತ್ತೇನೆ. ಮೊನ್ನೆ ತಾನೇ ನಿಮಿಷಾಂಬಾ ದೇವಸ್ಥಾನಕ್ಕೆ ಬಂದಿದ್ದೆ. ನನ್ನ ನೆಂಟರಿಷ್ಟರೆಲ್ಲ ಇಲ್ಲೇ ಇದ್ದಾರೆ. ಹಾಗಾಗಿ ನಾನು ಆಗಾಗ ಮಂಡ್ಯಕ್ಕೆ ಬಂದು ಹೋಗುತ್ತೇನೆ ಎಂದು ರಮ್ಯಾ ಪ್ರತಿಕ್ರಿಯಿಸಿದರು.

ಅಲ್ಲದೇ, ಇಂದು ನಾನು ಸ್ಟಾರ್ ಕ್ಯಾಂಪೇನರ್ ಆಗಿ, ರವಿ ಗಾಣಿಗ ಅವರಿಗೆ ಸಪೋರ್ಟ್ ಮಾಡಲು, ಪಕ್ಷದ ಕೆಲಸ ಮಾಡಲು ಬಂದಿದ್ದೇನೆ. ನಾನು ಚುನಾವಣೆಗೆ ನಿಲ್ಲೋ ಬಗ್ಗೆ ಏನೂ ಯೋಚನೆ ಮಾಡಲಿಲ್ಲ ಎಂದು ಹೇಳಿದ್ದಾರೆ. ಇನ್ನು ಅಂಬರೀಷ್ ತೀರಿಹೋದಾಗ, ನೀವು ಮಂಡ್ಯಕ್ಕೆ ಬಂದಿರಲಿಲ್ಲ. ಇದರಿಂದ ಆಕ್ರೋಶಗೊಂಡ ಅಂಬಿ ಅಭಿಮಾನಿಗಳು, ಗೋ ಬ್ಯಾಕ್ ರಮ್ಯಾ ಅಭಿಯಾನವನ್ನು ಮಾಡಿದ್ದರು. ಇದಕ್ಕೇನು ಹೇಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ನಾನು ಮೊದಲಿನಿಂದಲೂ ಹಾಗೆ. ನನ್ನ ಕೆಲಸ ವಿಷಯ ಅಷ್ಟೇ ನಾನು ಎಲ್ಲರ ಮುಂದೆ ಮಾತನಾಡುತ್ತೇನೆ. ಪರ್ಸನಲ್ ವಿಷಯದ ಬಗ್ಗೆ ಮಾತನಾಡುವುದಿಲ್ಲ. ನಾನು ಯಾಕೆ ಬಂದಿರಲಿಲ್ಲ ಎಂದು ಸೋಶಿಯಲ್ ಮೀಡಿಯಾ ಮೂಲಕ ನಾನು ಜನರಿಗೆ ತಿಳಿಸಿದ್ದೆ. ಆಗ ನನಗೆ ಟ್ಯೂಮರ್ ಬಂದಿತ್ತು. ಅದರ ಸರ್ಜರಿ ಮಾಡಿಸಿಕೊಂಡಿದ್ದೆ ಎಂದು ಹೇಳಿದ್ದಾರೆ.

ಅಲ್ಲದೇ, ನೀವು ಸಿನಿಮಾಗೆ ಬರಲ್ಲ ಅಂತಾ ಹೇಳ್ತಾ ಇದ್ರು. ಆದರೂ ನೀವು ಸಿನಿಮಾಗೂ ಬಂದ್ರಿ. ಈಗ ರಾಜಕೀಯಕ್ಕೂ ಬರುವ ಆಲೋಚನೆ ಇದೆಯಾ..? ನಾಯಕರು ಅವಕಾಶ ನೀಡಿದರೆ, ಚುನಾವಣೆಗೆ ನಿಲ್ಲುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಅದಕ್ಕೆಲ್ಲ ಇನ್ನೂ ಸಮಯವಿದೆ. ಕಾದು ನೋಡೋಣ. ನಾನು ಬರೀ ರಾಜಕೀಯ, ಸಿನಿಮಾ ಅಂತಾ ಇದ್ರೆ, ನಾನು ದುಡಿಬೇಕಲ್ಲಾ ಅದಕ್ಕೆ ಒಂದು ಸಿನಿಮಾ ಪ್ರೋಡ್ಯುಸ್ ಮಾಡ್ತಾ ಇದ್ದೇನೆ. ರಾಜಕೀಯಕ್ಕೆ ಬರುವ ಬಗ್ಗೆ ಮುಂದೆಂದಾದರೂ ಆಲೋಚಿಸೋಣ ಎಂದಿದ್ದಾರೆ.

‘ಗೌಡರ ಹುಡ್ಗಾ ಇದ್ರೆ ಹುಡುಕಿ, ಒಂದು ಸ್ವಯಂವರಾನೂ ಮಾಡಿಬಿಡಿ’

‘ರಾಜ್ಯದಲ್ಲಿ ಶಾಂತಿಯನ್ನು ಕದಡಿಸುತ್ತಿದ್ದಾರೆ. ನಾವು ಶಾಂತಿ ಮೂಡಿಸಬೇಕಾಗಿದೆ’

‘ಭಜರಂಗದಳ, ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದೀರಿ. ನಿಮ್ಮ ವಿನಾಶ ಕಾದಿದೆ. ‘

- Advertisement -

Latest Posts

Don't Miss