ಬೆಂಗಳೂರು:ಇಂದಿನಿಂದ ದೇಸಿ ಟೂರ್ನಿ ರಣಜಿ ಕ್ವಾರ್ಟರ್ ಫೈನಲ್ ಆರಂಭವಾಗಲಿದೆ.
ಮನೀಶ್ ನೇತೃತ್ವದ ಕರ್ನಾಟಕ ತಂಡ ಬಲಿಷ್ಠ ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ.
ಆಲೂರಿನ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳಲು ಮನೀಶ್ ಪಡೆ ಪಣ ತೊಟ್ಟಿದೆ. ಮಯಾಂಕ್ ಅಗರ್ ವಾಲ್, ದೇವದತ್ ಪಡಿಕಲ್, ಕರುಣ್ ನಾಯರ್ ಹಾಗೂ ನಾಯಕ ಮನೀಶ್ ಪಾಂಡೆ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.
ಆದರೆ ಬೌಲಿಂಗ್ ವಿಭಾಗ ಅಭಿಮನ್ಯು ಮಿಥುನ್, ವಿನಯ್ ಕುಮಾರ್ ರಂತಹ ಬೌಲರ್ ಗಳಿಲ್ಲದೇ ಇರುವುದರಿಂದ ಬೌಲಿಂಗ್ ವಿಆಭಗ ಸೊರಗಿದೆ. ಜೊತಗೆ ವೇಗಿ ಪ್ರಸಿದ್ಧ ಕೃಷ್ಣ ದ.ಆಫ್ರಿಕಾ ಸರಣಿಗೆ ಆಡುತ್ತಿರುವುದರಿಮದ ಕರ್ನಾಟಕ ತಂಡಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ತಂಡ ವೇಗಿ ರೋನಿತ್ ಮೋರೆ ಅವರನ್ನು ಅವಲಂಭಿಸಬೇಕಾಗಿದೆ.
ಇನ್ನು ಉತ್ತರ ಪ್ರದೇಶ ತಂಡ ರಿಂಕು ಸಿಂಗ್,ಯಶ್ ದಯಾಳ್, ಮೊಹ್ಸಿನ್ ಖಾನ್, ಆಕಾಶ್ ದೀಪ್ ನಾಥ್, ಪ್ರಿಯಂ ಗಾರ್ಗ್ ರಂತಹ ಐಪಿಎಲ್ ಆಟಗಾರರನ್ನು ನೆಚ್ಚಿಕೊಂಡಿದೆ.
ಮತ್ತೊಂದು ಕ್ವಾರ್ಟರ್ ಕದನಲ್ಲಿ ಮುಂಬೈ ಉತ್ತಾರಖಂಡ್ ತಂಡವನ್ನು ಎದುರಿಸಲಿದೆ. ಬಂಗಾಳ ಜಾರ್ಖಂಡ್ ವಿರುದ್ಧ ಹೋರಾಡಲಿದೆ. ಮತ್ತೊಂದು ಪಂದ್ಯದಲ್ಲಿ ಮಧ್ಯಪ್ರದೇಶ ಪಂಜಾಬ್ ವಿರುದ್ಧ ಸೆಣಸಲಿದೆ.

