Sunday, September 8, 2024

Latest Posts

ರೋಚಕ ಘಟದಲ್ಲಿ ಕರ್ನಾಟಕ, ಉ.ಪ್ರದೇಶ ಕ್ವಾರ್ಟರ್ ಕದನ

- Advertisement -

ಬೆಂಗಳೂರು: ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಿನ ರಣಜಿ ಕ್ವಾರ್ಟರ್ ಫೈನಲ್ ಕದನ ರೋಚಕ ಘಟ್ಟ ತಲುಪಿದೆ.  ಮೂರನೆ ದಿನವಾದ ಇಂದು ಫಲಿತಾಂಶ ಸಿಗಲಿದೆ.

ಆಲೂರಿನಲ್ಲಿ ನಡೆಯುತ್ತಿರುವ 2ನೆ ದಿನದಾಟದ ಪಂದ್ಯದಲ್ಲಿ ಬರೋಬ್ಬರಿ 21 ವಿಕೆಟ್ಗಳು ಪತನವಾದವು. ಮೊದಲ ದಿನ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಿತ್ತು.

ಎರಡನೆ ದಿನ 253 ರನ್ ಗಳಿಗೆ ಆಲೌಟ್ ಆಯಿತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ 155 ರನ್ ಗಳಿಗೆ ಆಲೌಟ್ ಆಯಿತು. ಎರಡನೆ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 8 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ, ಒಟ್ಟು 198 ರನ್ ಮುನ್ನಡೆ ಪಡೆದಿದೆ.

ಸಮರ್ಥ್ 11, ಮಯಾಂಕ್ 22, ಕರುಣ್ ನಾಯರ್ 10, ಸಿದ್ದಾರ್ಥ್ 15, ಶರತ್ ಔಟಾಗದೇ 10 ರನ್ ಗಳಿಸಿದರು. ಕೊನೆಯ 6 ವಿಕೆಟ್ ಗಳು 33 ರನ್ ಅಂತರದಲ್ಲಿ ಬಿದ್ದವು. ಉ.ಪ್ರದೇಶ ಪರ ಸೌರಭ್ ಕುಮಾರ್ 3, ಅಂಕೀತ್ ರಜಪೂತ್ 2 ವಿಕೆಟ್ ಪಡೆದರು.

ಸಂಘಟಿತ ದಾಳಿ ಪ್ರದರ್ಶಿಸಿದ ಕರ್ನಾಟಕ

ಮೊದಲ ಇನ್ನಿಂಗ್ಸ್ ನಲ್ಲಿ ಸಾಧಾರಣ ಮೊತ್ತ ಪೇರಿಸಿದ ಕರ್ನಾಟಕ ತಂಡ ಬೌಲಿಂಗ್ ನಲ್ಲಿ ಅದ್ಭುತ ಸಂಘಟಿತ ದಾಳಿ ನಡೆಸಿ ಉ.ಪ್ರದೇಶ ತಂಡಕ್ಕೆ ತಿರುಗೇಟನ್ನು ಕೊಟ್ಟಿತ್ತು. ಆರಂಭದಲ್ಲೆ ವಿಕೆಟ್ ಕಳೆದುಕೊಂಡಿದ್ದರಿಂದ ಎಲ್ಲಿಯೂ ಮರು ಹೋರಾಟ ಪ್ರದರ್ಶಿಸಿಲಲ್ಲಿಲ್ಲ. ರಿಂಕು ಸಿಂಗ್ 33 ರನ್ ಗಳಿಸಿದರು. ಶಿವಂ ಮಾವಿ 32 , ರಜಪೂತ್ 16 ರನ್ ಗಳಿಸಿ ತಂಡದ ಮೊತ್ತ 150 ರನ್ ಗಡಿ ದಾಟಿಸಿದರು.

- Advertisement -

Latest Posts

Don't Miss