ಬೆಂಗಳೂರು: ಹಾರ್ದಿಕ್ ತಮೋರ್ ಅವರ ಶತಕದ ನೆರೆವಿನಿಂದ ಮುಂಬೈ ತಂಡ ಎರಡನೆ ದಿನ ಉತ್ತರ ಪ್ರದೇಶ ವಿರುದ್ಧ ಮೇಲುಗೈ ಸಾಸಿದೆ.
ರಣಜಿ ಟೂರ್ನಿಯ ಎರಡನೆ ಸೆಮಿಫೈನಲ್‍ನ ಎರಡನೆ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಮುಂಬೈ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ 393 ರನ್ ಪೇರಿಸಿತು. ದಿನದಾಟದ ಅಂತ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ 25 ರನ್‍ಗಳಿಗೆ 2ವಿಕೆಟ್ ನಷ್ಟ ಅನುಭವಿಸಿ ಆಘಾತ ಅನುಭವಿಸಿದೆ.
ಮೊದಲ ದಿನ 51 ರನ್ ಗಳಿಸಿದ್ದ ಹಾರ್ದಿಕ್ ತಮೊರ್ ಎರಡನೆ ದಿನ ಹಾರ್ದಿಕ್ ತಮೊರ್ ಎಚ್ಚರಿಕೆ ಆಟವಾಡಿದರು. ಇವರಿಗೆ ಶಾಮ್ಸ್ ಮುಲಾನಿ ಒಳ್ಳೆಯ ಸಾಥ್ ಕೊಟ್ಟರು. ಮುಲಾನಿ 5 ಬೌಂಡರಿಯೊಂದಿಗೆ ಅರ್ಧ ಶತಕ ಸಿಡಿಸಿದರು. ಹಾರ್ದಿಕ್ ತಮೋರ್ 12 ಬೌಂಡರಿ 1 ಸಿಕ್ಸರ್ ಸಿಡಿಸಿ ಒಟ್ಟು 115 ರನ್ ಗಳಿಸಿ ಸೌರಭ್ಗೆ ವಿಕೆಟ್ ಒಪ್ಪಿಸಿದರು. ತಾನೂಶ್ ಕೋಟ್ಯಾನ್ 22 ರನ್, ತುಷಾರ್ ದೇಶಪಾಂಡೆ 1 ರನ್ ಗಳಿಸಿದರು. ಉತ್ತರ ಪ್ರದೇಶ ಪರ ಕರಣ್ ಶರ್ಮಾ 4, ಸೌರಭ್ ಕುಮಾರ್ 3 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ ತಂಡ ಆರಂಭಿಕ ಬ್ಯಾಟರ್ ಸಮರ್ಥ್(0) ಸಿಂಗ್ ಹಾಗೂ ಪ್ರೀಯಾಮ್ ಗರ್ಗ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ದಿನದಾಟದ ಅಂತ್ಯದಲ್ಲಿ ಮಾಧವ್ ಕೌಶಿಕ್ ಅಜೇಯ 11, ಕರಣ್ ಶರ್ಮಾ ಅಜೇಯ 10 ರನ್ ಗಳಿಸಿ ಮೂರನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡರು.
ತಂಡಕ್ಕೆ ಆಸರೆಯಾದ ತಿವಾರಿ, ಶಾಬಾಜ್
ಆಲೂರಿನಲ್ಲಿ ನಡೆಯುತ್ತಿರುವ ಮೊದಲ ಸೆಮಿಫೈನಲ್‍ನಲ್ಲಿ ಮಧ್ಯಪ್ರದೇಶ ಬಂಗಾಳ ವಿರುದ್ಧ ಮೇಲುಗೈ ಸಾಸಿದೆ. ಮೊದಲ ದಿನ ಶತಕ ಸಿಡಿಸಿದ್ದ ಹಿಮಾನ್ಶು ಮಂತ್ರಿ ಎರಡನೆ ದಿನ 165 ಗಳಿಸಿದರು. ಆಕಾಶ್ ರಘುವನ್ಶಿ 63 ರನ್ ಕಲೆ ಹಾಕಿದರು. ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್‍ನಲ್ಲಿ 341 ರನ್‍ಗೆ ಆಲೌಟ್ ಆಯಿತು. ಮುಖೇಶ್ ಕುಮಾರ್ 4, ಶಾಬಾಜ್ ಅಹ್ಮದ್ 3 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಬಂಗಾಳ ತಂಡ ಆಘಾತ ಅನುಭವಿಸಿತು. 54 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮನೋಜ್ ತಿವಾರಿ ಹಾಘೂ ಶಾಬಾಜ್ ಅಹ್ಮದ್ ಆಸರೆಯಾದರು. ತಿವಾರಿ ಅಜೇಯ 84 ಹಾಗೂ ಶಾಬಾಜ್ ಅಹ್ಮದ್ ಅಜೇಯ 72 ರನ್ ಗಳಿಸಿದರು. ಬಂಗಾಳ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿದೆ.