ಇಂಗ್ಲೆಂಡ್ ಟೆಸ್ಟ್‍ಗೆ ಕನ್ನಡಿಗ ರಾಹುಲ್ ಅಲಭ್ಯ

ಮುಂಬೈ:  ಗಾಯದಿಂದ ಚೇತರಿಸಿಕೊಳ್ಳದಿರುವ ಹಿನ್ನೆಲೆಯಲ್ಲಿ  ಕನ್ನಡಿಗ ಕೆ.ಎಲ್.ರಾಹುಲ್ ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದನೆ ಟೆಸ್ಟ್ ಪಂದ್ಯಕ್ಕೆ  ಅಲಭ್ಯರಾಗಲಿದ್ದಾರೆ.

ಈಗಾಗಲೇ ತವರಿನಲ್ಲಿ  ದ.ಆಫ್ರಿಕಾ ಸರಣಿಯಿಂದ ಹೊರ ನಡೆದಿದ್ದ ಕೆ.ಎಲ್.ರಾಹುಲ್ ಇದೀಗ ಆಂಗ್ಲರ ವಿರುದ್ಧದ ಟೆಸ್ಟ್ ಪಂದ್ಯದಂದ ದೂರ ಉಳಿಯುವ ಸಾಧ್ಯತೆ ಹೆಚ್ಚಾಗಿದೆ.

ಗಾಯದ ಸಮಸ್ಯೆಯಿಂದ ರಾಹುಲ್ ಇನ್ನು ಚೇತರಿಸಿಕೊಂಡಿಲ್ಲ. ಟೆಸ್ಟ್ ತಂಡದ ಆಟಗಾರರು ಮುಂಬೈನಿಂದ ಪ್ರಯಾಣ ಬೆಳೆಸಿದ್ದಾರೆ. ರಾಹುಲ್ ತಂಡದೊಂದಿಗೆ ಪ್ರಯಾಣ ಬೆಳೆಸಿಲ್ಲಘಿ.ವಾರಂತ್ಯದಲ್ಲಿ ಫಿಟ್ನೆಸ್ ಪರೀಕ್ಷೆಯಲ್ಲಿ ರಾಹುಲ್ ಪಾಲ್ಗೊಂಡರೂ ಚೇತರಿಸಿಕೊಳ್ಳಲು ರಾಹುಲ್‍ಗೆ ಸಮಯ ಬೇಕೆಂದು ಬಿಸಿಸಿಐ ಅಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ಟೆಸ್ಟ್ ಪಂದ್ಯ ಆಗಿರುವುದರಿಂದ ರಾಹುಲ್ ಸ್ಥಾನಕ್ಕೆ ಹೊಸ ಆಟಗಾರನಿಗೆ ಅವಕಾಶ ಕೊಡುವುದು ಕಷ್ಟ. ಶುಭಮನ್ ಗಿಲ್ ಅಥವಾ ಚೇತೇಶ್ವರ ಪೂಜಾರ ಆರಂಭಿಕರಾಗಿ ಕಣಕ್ಕಿಳಿಯಬಹುದೆಂದು ಬಿಸಿಸಿಐ ಮೂಲಗಳು ಹೇಳುತ್ತಿವೆ.

ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಘಿ,ಚೇತೇಶ್ವರ ಪೂಜಾರ, ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮದ್ ಶಮಿ  ಗುರುವಾರ ರಾತ್ರಿ ಆಂಗ್ಲರ ನಾಡಿಗೆ ಪ್ರಯಾಣ ಬೆಳೆಸಿದ್ದಾರೆ.

 

 

 

 

About The Author