Bollywood News: ಬಾಲಿವುಡ್ ನಟ ರಣ್ಬೀರ್ ಕಪೂರ್ ಮೊನ್ನೆ ಕ್ರಿಸ್‌ಮಸ್ ದಿನ ತಮ್ಮ ಮಗಳ ಮುಖವನ್ನು ಮೊದಲ ಬಾರಿ ರಿವೀಲ್ ಮಾಡಿ, ಮಕ್ಕಳ ಕಲ್ಯಾಣಕ್ಕಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಆದರೆ ಇದೀಗ, ಅದೇ ಕ್ರಿಸ್‌ಮಸ್ ಹಬ್ಬದ ಸೆಲೆಬ್ರೇಶನ್‌ನಲ್ಲಿ ರಣ್ಬೀರ್ ಎಡವಟ್ಟು ಮಾಡಿಕೊಂಡಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕ್ರಿಸ್‌ಮಸ್ ಪಾರ್ಟಿಯಂದು ರಣ್ಬೀರ್ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಎಲ್ಲ ಒಂದೆಡೆ ಸೇರಿ ಪಾರ್ಟಿ ಮಾಡಿದ್ದರು. ಈ ವೇಳೆ ಕೇಕ್ ಕತ್ತರಿಸಲಾಗಿತ್ತು. ಕೇಕ್ ಕತ್ತರಿಸು ಮುನ್ನ ಆ ಕೇಕ್ ಮೇಲೆ ಮದ್ಯವನ್ನು ಹಾಕಲಾಗಿತ್ತು. ಇದಕ್ಕೆ ರಣಬೀರ್ ಬೆಂಕಿ ಹಚ್ಚಿದ್ದರು. ಬಳಿಕ ಜೈ ಮಾತಾದಿ ಎಂದಿದ್ದರು. ಇವರೊಂದಿಗೆ ಅಲ್ಲಿ ನೆರೆದಿದ್ದವರೂ ಕೂಡ ಜೈ ಮಾತಾದಿ ಎಂದು ಘೋಷಣೆ ಕೂಗಿದ್ದರು. ಆದರೆ ಇದೇ ರಣ್ಬೀರ್ ಪಾಲಿಗೆ ಮುಳ್ಳಾಗಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲವರು ಕ್ರಿಸ್‌ಮಸ್ ಹಬ್ಬದಲ್ಲೂ ರಣ್ಬೀರ್ ಹಿಂದೂ ದೇವರನ್ನ ಮರೆಯಲಿಲ್ಲವೆಂದು ಭೇಷ್ ಎಂದರೆ, ಇನ್ನು ಕೆಲವರು ಬೇರೆ ಧರ್ಮದ ಹಬ್ಬ ಆಚರಿಸುವಾಗ, ಮದ್ಯ ಸೇವನೆ ಮಾಡುವಾಗ. ಹಿಂದೂ ದೇವರ ಹೆಸರು ತೆಗೆದುಕೊಂಡಿದ್ದಾನೆಂದು ಕಿಡಿ ಕಾರಿದ್ದರು.
ಇನ್ನು ಕೆಲವರು ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ರಣ್ಬೀರ್ ಅಗ್ನಿಗೆ ಅವಮಾನಿಸಿದ್ದಾನೆ. ಬೇರೆ ಧರ್ಮದ ಹಬ್ಬ ಮಾಡುವಾಗ, ಮದ್ಯ ಬಳಸುವಾಗ, ಹಿಂದೂ ದೇವತೆಯ ಹೆಸರು ಬಳಸಿ ಅಪಚಾರ ಮಾಡಿದ್ದಾನೆಂದು, ರಣ್ಬೀರ್ ಮತ್ತು ಕುಟುಂಬಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಾರಾಯಣಗೌಡ ಸೇರಿ 29 ಜನ ಕರವೇ ಕಾರ್ಯಕರ್ತರಿಗೆ 13 ದಿನ ನ್ಯಾಯಾಂಗ ಬಂಧನ