Wednesday, December 11, 2024

Latest Posts

ಕೋವಿಡ್ ನಿರ್ಭಂದಗಳಿoದ ರಣವೀರ್ ಸಿಂಗ್‌ರ ಸಿನಿಮಾ 83 ಒಟಿಟಿ ಯಲ್ಲಿ ಬಿಡುಗಡೆಯಾಗುತ್ತದೆಯೆ..?

- Advertisement -

ಕಬೀರ್‌ಖಾನ್ ನಿರ್ದೇಶಿಸಿದ 83 ಸಿನಿಮಾ ವಿಶ್ವಕಪ್ ನಲ್ಲಿ ಭಾರತದ ಕ್ರಿಕೆಟ್ ತಂಡದ ಗೆಲುವಿನ ಕಥೆಯನ್ನು ಆದರಿಸಿ ತೆಗೆದಂತಹ ಚಿತ್ರವಾಗಿತ್ತು, ಈ ಚಿತ್ರಕ್ಕೆ ದೇಶದಲ್ಲಿಯೇ ಬಾರಿ ನಿರೀಕ್ಷೆ ಇತ್ತು, ಕಬೀರ್‌ಖಾನ್ ಕಪಿಲ್‌ದೇವ್ ಪಾತ್ರದಿಂದ ಹಿಡಿದು ಎಲ್ಲಾ ಪಾತ್ರಕ್ಕೂ ನಿಜವಾಗಿ ಜೀವ ತುಂಬಿದ್ದರು. ರಣವೀರ್‌ಸಿಂಗ್ ಅವರ ಅಭಿನಯ ಈ ಚಿತ್ರದಲ್ಲಿ ಭಾರತದ ಎಲ್ಲಾ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.
ಆದರೆ ಈ ಚಿತ್ರವು ನಿರೀಕ್ಷಿಸಿದ ರೀತಿಯಲ್ಲಿ ಹಣವನ್ನು ಪಡೆದಿಲ್ಲ, ದೇಶದಾದ್ಯಂತ ಕೋವಿಡ್ ಪ್ರಕರಣಗಳ ಹೆಚ್ಚಳದಿಂದ ದೆಹಲಿಯಲ್ಲಿ ಥಿಯೇಟರ್‌ಗಳು ಮುಚ್ಚಲ್ಪಟ್ಟವು ಮತ್ತು ಮುಂಬೈನಲ್ಲಿ ಕಡಿಮೆ ಪ್ರದರ್ಶನಗಳಾದವು ಹಾಗಾಗಿ ನಿರೀಕ್ಷೆ ಹಣವನ್ನು ಪಡೆದಿಲ್ಲ, ಈಗಾಗಿ ಚಿತ್ರದ ಡಿಜಿಟಲ್ ಚೊಚ್ಚಲ ಕುರಿತು ಮಾತನಾಡಿದ ನಿರ್ದೇಶಕ ಕಬೀರ್ ಖಾನ್, ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿದರೆ ಶೀಘ್ರದಲ್ಲೇ ವೆಬ್‌ನಲ್ಲಿ 83 ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಗಲ್ಲಾ ಪೆಟ್ಟಿಗೆಯಲ್ಲಿ ಈ ಚಿತ್ರವು 11.90 ಕೋಟಿ ರುಪಾಯಿಗಳೊಂದಿಗೆ ತೆರೆಕಂಡಿತು. ಒಂಬತ್ತು ದಿನಗಳ ಅಂತ್ಯಕ್ಕೆ 79.46 ಕೋಟಿ ಸಂಗ್ರಹವಾಗಿದೆ. ಬಾಕ್ಸ್ ಆಫೀಸ್ ಇಂಡಿಯಾದ ಪ್ರಕಾರ 38 ಲಕ್ಷ ಟಿಕೇಟ್‌ಗಳು ಸೇಲ್ ಅಗಿವೆ, ಶಾರುಖ್ ಖಾನ್ ಅವರ ಜೀರೋ ಸಿನಿಮಾ ಈ ಹಿಂದೆ 39 ಲಕ್ಷ ಟಿಕೇಟ್‌ಗಳನ್ನು ಪಡೆದುಕೊಂಡಿತ್ತು, ಹಾಗಾಗಿ ಬಾಕ್ಸ್ ಆಫೀಸ್‌ನಲ್ಲಿ ಜೀರೋ ಸಿನಿಮಾಕ್ಕಿಂತಲೂ ಸೋತಿದೆ. ಈಗಾಗಿ ಸಿನಿಮಾವನ್ನು ಒಟಿಟಿ ಫ್ಲಾಟ್‌ಪಾರಂನಲ್ಲಿ ಬಿಡಲು ನಿರ್ದರಿಸಿದೆ.

- Advertisement -

Latest Posts

Don't Miss