Thursday, June 19, 2025

Latest Posts

ಸುಲಭವಾಗಿ ಕಣ್ಣಿಗೆ ಕಾಣದ, ಅಪರೂಪದ ಜೀವಿಗಳಿವು..

- Advertisement -

ನಾವು ಪ್ರಪಂಚದಲ್ಲಿ ಹಲವಾರು ಜಾತಿಯ ಪ್ರಾಣಿ ಪಕ್ಷಿಗಳನ್ನ ನೋಡಿರ್ತೀವಿ. ಹಲವು ಪ್ರಾಣಿ ಪಕ್ಷಿಗಳ ಬಗ್ಗೆ ಕೇಳಿರ್ತೀವಿ. ಆದ್ರೆ ನೀವು ಯಾವತ್ತಾದ್ರೂ ಸುಲಭವಾಗಿ ಕಣ್ಣಿಗೆ ಕಾಣದ ಪ್ರಾಣಿ, ಪಕ್ಷಿ, ಕೀಟಗಳ ಬಗ್ಗೆ ಕೇಳಿದ್ದೀರಾ..? ಕೇಳದಿದ್ದಲ್ಲಿ ಆ ವಿಷಯದ ಬಗ್ಗೆಯೇ ನಾವಿಂದು ಮಾಹಿತಿ ನೀಡಲಿದ್ದೇವೆ.

1.ಲೀಫ್ ಇನ್ಸೆಟ್. ಇದು ಥೇಟ್ ಹಸಿರು ಎಲೆಯ ಥರ ಕಾಣುವ ಕೀಟವಾಗಿದೆ. ಹಸಿರು ಎಲೆಯ ಮೇಲೆ ಈ ಕೀಟ ಕುಳಿತುಕೊಂಡರೆ, ನೀವು ಅಷ್ಟು ಸುಲಭವಾಗಿ ಅದನ್ನ ಕಂಡು ಹಿಡಿಯೋಕ್ಕೆ ಸಾಧ್ಯಾನೇ ಆಗಲ್ಲ.

  1. ಈಸ್ಟರ್ನ್ ಸ್ಕ್ರೀಚ್ ಓವಲ್. ಇದೊಂದು ಜಾತಿಯ ಗೂಬೆ. ಇದು ಥೇಟ್ ಮರದ ಕಲರ್ ರೀತಿನೇ ಬಣ್ಣ ಹೊಂದಿರತ್ತೆ. ಇದು ಮರದ ಪೊಟರೆಯಲ್ಲಿ ಕೂತರೆ, ಇದರ ಕಣ್ಣು ಮಾತ್ರ, ಎದ್ದು ಕಾಣತ್ತೆ. ಅಕಸ್ಮಾತ್ ಈ ಗೂಬೆ ಕಣ್ಣು ಮುಚ್ಚಿ, ಮರದಲ್ಲಿ ಕುಳಿತರೆ, ಅಲ್ಲೊಂದು ಗೂಬೆ ಇದೆ ಅನ್ನೋದು ಗೊತ್ತಾಗಲ್ಲ. ಹಾಗಿರತ್ತೆ.
  2. ದಿ ಬಫ್ ಟಿಪ್ ಮೌತ್. ಈ ಕೀಟ ನೋಡೋಕ್ಕೆ ಸೇಮ್ ಕಟ್ ಮಾಡಿದ ಮರದ ಥರಾನೇ ಇರತ್ತೆ. ಇದನ್ನ ಸಡೆನ್‌ ಆಗಿ ನೋಡಿದವರು, ಇದೊಂದು ಮರದ ತುಂಡು ಅಂತಾನೇ ಹೇಳ್ತಾರೆ. ಆದ್ರೆ ಇದರ ಮೂವ್‌ಮೆಂಟ್ ನೋಡಿದ ತಕ್ಷಣ, ಇದು ಕೀಟ ಅನ್ನೋದು ಗೊತ್ತಾಗತ್ತೆ.
  3. ಲ್ಯಾಪ್ಟೋ ಸೆಫಲಸ್. ಇದು ಪುಟ್ಟ ಹಾವಿನಷ್ಟು ಉದ್ದವಿರುವ ಮೀನಾಗಿದೆ. ಇದು ಮೊಟ್ಟೆಯಿಂದ ಹೊರ ಬಂದ ಬಳಿಕ, ನೀರಿನ ಬಣ್ಣದ್ದೇ ಆಗಿರುತ್ತದೆ. ಹಾಗಾಗಿ ದೊಡ್ಡ ದೊಡ್ಡ ಜೀವಿಗಳು ಇದರ ಮೇಲೆ ಅಟ್ಯಾಕ್ ಮಾಡೋದು ಅಷ್ಟು ಸುಲಭವಲ್ಲ. ಆದ್ರೆ ನಂತರದ ದಿನಗಳಲ್ಲಿ ತಮ್ಮ ರಕ್ಷಣೆ ತಮಗೆ ಮಾಡಿಕೊಳ್ಳಲು ಬಂದಾಗ, ಅದು ಬೇರೆ ಬಣ್ಣಕ್ಕೆ ಬರುತ್ತದೆ.
  4. ಓಕ್ ಲೀಫ್ ಬಟರ್ ಫ್ಲೈ. ಇದು ಸೇಮ್ ಒಣಗಿದ ಎಲೆಯ ಬಣ್ಣದಂತಿರುವ ಚಿಟ್ಟೆ. ಈ ಚಿಟ್ಟೆ ರೆಕ್ಕೆ ಮುಚ್ಚಿಕೊಂಡು ಇದ್ರ, ಸೇಮ್ ಒಣಗಿದ ಎಲೆ ಇದ್ದ ಹಾಗಿರುತ್ತದೆ. ರೆಕ್ಕೆ ಬಿಚ್ಚಿದರೆ ಇದರ ಒಳಗಿನ ಬಣ್ಣ ಚಂದವಾಗಿರುತ್ತದೆ.
  5. ಲೀಫ್ ಟೇಲ್ಡ್ ಗೇಕೋ. ಇದು ಕೂಡ ಒಣಗಿದ ಎಲೆಯ ರೀತಿ ಇರುವ ಹಲ್ಲಿಯಾಗಿದೆ. ಇದು ಮರದ ಮೇಲೆ ಕುಳಿತರೆ, ಒಣಗಿದ ಎಲೆಯ ರೀತಿ ಕಾಣುತ್ತದೆ. ಇದಕ್ಕೆ ಬಣ್ಣ ಬದಲಿಸಲು ಕೂಡ ಸಾಧ್ಯವಾಗುತ್ತದೆ.

- Advertisement -

Latest Posts

Don't Miss