Thursday, June 19, 2025

Latest Posts

ಇದು ಪ್ರಪಂಚದ ಅಪರೂಪದ ಮೊಟ್ಟೆಗಳು..

- Advertisement -

ನಮ್ಮಲ್ಲಿ ಹಲವರು ಮೊಟ್ಟೆ ಪ್ರಿಯರಿದ್ದಾರೆ. ಅವರಿಗೆ ಪ್ರತಿದಿನ ಮೊಟಟ್ಟೆ ತಿನ್ನುವ ಅಭ್ಯಾಸವಿರುತ್ತದೆ. ಅಲ್ಲದೇ ಆಮ್ಲೇಟ್ ಮತ್ತು ಮೊಟ್ಟೆಯಿಂದ ಮಾಡಿದ ಹಲವು ಖಾದ್ಯಗಳನ್ನ ಅವರು ಇಷ್ಟಾ ಪಡ್ತಾರೆ. ಅಂಥವರಿಗಾಗಿ ಮತ್ತು ಹಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ತವಕವಿರುವವರಿಗಾಗಿ ನಾವಿಂದು ಮೊಟ್ಟೆ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಿಲಿದ್ದೇವೆ. ಯಾವ ರೀತಿಯ ಮೊಟ್ಟೆಗಳಿದೆ..? ಯಾವ ಯಾವ ಕಲರ್ ಮೊಟ್ಟೆಗಳಿರುತ್ತದೆ..? ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

  1. ಸೌತರ್ನ್ ಕ್ಯಾಸವೇರಿ ಎಗ್ಸ್. ಇದು ಒಂದು ರೀತಿಯ ಆಸ್ಟ್ರೀಚ್ ಪಕ್ಷಿಯಾಗಿದೆ. ಆಸ್ಟ್ರಿಚ್ ಪಕ್ಷಿಗಳ ಮೊಟ್ಟೆ ದೊಡ್ಡದಿರತ್ತೆ ಅಂತಾ ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಈ ಪಕ್ಷಿಯ ಮೊಟ್ಟೆ ದೊಡ್ಡದಿರುವುದರ ಜೊತೆಗೆ, ಹಸಿರು ಬಣ್ಣದ್ದಾಗಿರುತ್ತದೆ. ಈ ಪಕ್ಷಿ ಒಂದೇ ಸಲ, 3ರಿಂದ 4 ಮೊಟ್ಟೆಯನ್ನ ಇಡುತ್ತದೆ. 650 ಗ್ರಾಂನಷ್ಟಿರುವ ಈ ಮೊಟ್ಟೆ, ನೋಡೋಕ್ಕೆ ಸೇಮ್ ಬಟರ್ ಫ್ರೂಟ್ ಥರಾ ಕಾಣತ್ತೆ.
  2. ಹಾರ್ನ್ ಶಾರ್ಕ್ ಎಗ್ಸ್. ನೀವು ಈ ಮೊಟ್ಟೆಯನ್ನ ನೋಡಿದ್ರೆ, ಖಂಡಿತ ಇದು ಮೊಟ್ಟೆ ಎಂದು ನಂಬಲ್ಲ. ಯಾಕಂದ್ರೆ, ಇದು ಎಲ್ಲ ಮೊಟ್ಟೆಗಳಂತೆ ಕಾಣಲ್ಲ. ಬದಲಾಗಿ ಯಾವುದೋ ಎಲೆಯನ್ನ ಸುತ್ತಿಟ್ಟ ಹಾಗೆ ಕಾಣಿಸುತ್ತೆ. ಶಾರ್ಕ್ ಮೊಟ್ಟೆ ಇಟ್ಟ ನಂತರ, ಸಮುದ್ರದ ಆಳದಲ್ಲಿರುವ ಕಲ್ಲುಗಳ ಮಧ್ಯದಲ್ಲಿ ಮುಚ್ಚಿಡುತ್ತದೆ. ಮತ್ತು ತನ್ನ ಪಾಡಿಗೆ ತಾನು ಹೋಗುತ್ತದೆ. ಮೊಟ್ಟೆಯಿಂದ ಹೊರ ಬಂದ ಮರಿ ಶಾರ್ಕ್, ತನ್ನ ಪಾಡಿಗೆ ತಾನು ಬೆಳೆಯುತ್ತದೆ.
  3. ರಾಬಿನ್ ಎಗ್. ರಾಬಿನ್ ಎನ್ನುವ ಪಕ್ಷಿ ನೋಡಲು ಎಷ್ಟು ಸುಂದರವಾಗಿದೆಯೋ, ಅದರ ಮೊಟ್ಟೆ ಕೂಡ ಅಷ್ಟೇ ಸುಂದರವಾಗಿದೆ. ಇದರ ಮೊಟ್ಟೆಯ ಕಲರ್ ನೀಲಿ ಬಣ್ಣದ್ದಾಗಿದೆ. ಇದರಿಂದ ಹಕ್ಕಿ ಹೊರ ಬರೋಕ್ಕೆ, 15ಕ್ಕೂ ಹೆಚ್ಚು ದಿನ ಬೇಕಾಗುತ್ತದೆ.
  4. ಎಲ್ಲೋ ಹೆಡೇಡ್ ಜಾವ್‌ಫಿಶ್ ಎಗ್‌. ಈ ಮೀನು ಒಂದೇ ಸಾರಿ ಇನ್ನೂರರಿಂದ ಮೂನ್ನೂರು ಮೊಟ್ಟೆಗಳನ್ನ ಇಡುತ್ತದೆ. ಹೆಣ್ಣು ಮೀನು ಹೀಗೆ ಮೊಟ್ಟೆಯನ್ನಿಟ್ಟರೆ, ಗಂಡು ಮೀನು ಆ ಇನ್ನೂರರಿಂದ ಮುನ್ನೂರು ಮೊಟ್ಟೆಯನ್ನ ಬಾಯಿಯಲ್ಲಿ ಇಟ್ಟುಕೊಂಡಿರುತ್ತದೆ. ಇದು ಎಲ್ಲಿಯವರೆಗೆ ಎಂದರೆ, ಈ ಮೊಟ್ಟೆ ಮರಿಗಳನ್ನು ಹಾಕುವ ತನಕ ಗಂಡು ಮೀನು ಬಾಯಿಯಲ್ಲಿ ಮೊಟ್ಟೆಗಳನ್ನ ಇಟ್ಟುಕೊಂಡಿರುತ್ತದೆ. ಮತ್ತು ಅಷ್ಟು ಮೊಟ್ಟೆ ಮರಿ ಹಾಕುವ ತನಕ, ಗಂಡು ಮೀನು ಆಹಾರ ಸೇವಿಸುವುದಿಲ್ಲ.

- Advertisement -

Latest Posts

Don't Miss