Wednesday, September 11, 2024

Latest Posts

ಬಿಗ್ ಬಿಗೆ ಫಾದರ್ಸ್ ಡೇ ಗಿಫ್ಟ್ ನೀಡಿದ ರಶ್ಮಿಕಾ…

- Advertisement -

www.karnatakatv.net: ಸಿನಿಮಾ– ರಶ್ಮಿಕಾ ಮಂದಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡದಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಎಂಟ್ರಿ ಕೊಟ್ಟು ಸಕ್ಸಸ್ ಕಂಡು, ಬಳಿಕ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಅಲ್ಲೂ ಸಹ ಗೆಲುವು ಕಂಡುಕೊಂಡ ನಟಿ. ಇದೀಗ ಬಾಲಿವುಡ್ ಅಂಗಳಕ್ಕೆ ಲಗ್ಗೆ ಇಟ್ಟಿರುವ ಈ ಬೆಡಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‍ರ ಜೊತೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾಳೆ. ಅಮಿತಾಬ್ ಬಚ್ಚನ್ ಜೊತೆ ‘ಗುಡ್ ಬೈ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣವೂ ಸಹ ಶುರುವಾಗಿದೆ. ನಿನ್ನೆ ಫಾದರ್ಸ್ ಡೇ ವಿಶೇಷವಾದ್ದರಿಂದ ರಶ್ಮಿಕಾ ಮಂದಣ್ಣ ಬಿಗ್ ಬಿಗೆ ಸ್ಪೆಷಲ್ ಗಿಫ್ಟ್ ನೀಡುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ. ರಶ್ಮಿಕಾಳ ಈ ಸರ್ಪ್ರೈಸ್ ಗಿಫ್ಟ್ ಗೆ ಬಿಗ್ ಬಿ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು, ರಶ್ಮಿಕಾ ಹಿಂದಿಯಲ್ಲಿ ‘ಗುಡ್ ಬೈ’ ಸಿನಿಮಾ ಸೇರಿದಂತೆ ‘ಮಿಷನ್ ಮಜ್ನು’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

- Advertisement -

Latest Posts

Don't Miss