Friday, June 20, 2025

Latest Posts

ವೆಜ್ ಥಾಲಿಯ ಪದಾರ್ಥದಲ್ಲಿ ಇಲಿ ತಲೆ ಪ್ರತ್ಯಕ್ಷ, ದೂರು ದಾಖಲು..!

- Advertisement -

ನೀವೇನಾದ್ರೂ ವೆಜಿಟೇರಿಯನ್ ಆಗಿದ್ದು, ಹೊಟೇಲ್‌ನಿಂದ ತಂದ ವೆಜ್ ಊಟದಲ್ಲಿ ನಿಮಗೆ ಇಲಿಯ ತಲೆ ಸಿಕ್ಕಿದ್ರೆ, ಹೇಗನ್ನಿಸುತ್ತೆ..? ವ್ಯಾಕ್. ಇದೇ ರೀತಿಯ ಘಟನೆ ತಮಿಳುನಾಡಿನ ತಿರುವನ್ನಾಮಲೇನ, ಅರ್ನಿ ಎಂಬ ಊರಿನ ವೆಜ್ ಹೊಟೇಲ್‌ನಲ್ಲಿ ನಡೆದಿದೆ. ಮುರುಳಿ ಎಂಬ ವ್ಯಕ್ತಿ ತಮ್ಮ ಮನೆಯ ಕಾರ್ಯಕ್ರಮಕ್ಕಾಗಿ ಬಾಲಾಜಿ ಭವನ್ ಹೊಟೇಲ್‌ನಲ್ಲಿ 30 ಮಂದಿಗಾಗುವಷ್ಟು ಊಟ ಆರ್ಡರ್ ಮಾಡಿದ್ರು. ವೆಜ್ ಥಾಲಿ ಆರ್ಡರ್ ಮಾಡಿ, ಕಾರ್ಯಕ್ರಮಕ್ಕೆ ಕೊಂಡೊಯ್ದಾಗ ಅವರಿಗೆ ಶಾಕ್ ಕಾದಿತ್ತು.

ಜೊತೆಯಾಗಿ ನೇಣಿಗೆ ಶರಣಾಗುವ ವೇಳೆ ಪತಿ ಸಾವು- ಪತ್ನಿ ಬಚಾವ್..!

ಕಾರ್ಯಕ್ರಮಕ್ಕೆ ಬಂದ ಓರ್ವ ವ್ಯಕ್ತಿಗೆ ಬಡಿಸಿದ ಬೀಟ್‌ರೂಟ್ ಪಲ್ಯದಲ್ಲಿ, ಇಲಿ ತಲೆ ಬುರುಡೆ ಸಿಕ್ಕಿದೆ. ಆಗ ಮುರುಳಿ ತೆಗೆದುಕೊಂಡು ಹೋಗಿದ್ದ ಪಾರ್ಸೆಲನ್ನ ಕಟ್ಟಿಕೊಂಡು ವಾಪಸ್ ಅದೇ ಹೊಟೇಲಿಗೆ ಬಂದು, ಓನರ್ ಬಳಿ ಈ ಬಗ್ಗೆ ಸರಿಯಾಗಿ ವಿಚಾರಿಸಿದ್ದಾರೆ. ಆದ್ರೆ ತಪ್ಪನ್ನು ಒಪ್ಪಿಕೊಳ್ಳದ ಹೊಟೇಲ್ ಮಾಲೀಕ, ನಾವು ನಿಮಗೆ ಊಟ ಪಾರ್ಸೆಲ್ ನೀಡಿ 6 ಗಂಟೆ ಕಳೆದಿವೆ. ನೀವು ಈಗ ಬಂದು ದೂರು ಹೇಳಿದ್ರೆ, ಅದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

ಗಣೇಶ ವಿಸರ್ಜನೆ ವೇಳೆ 12 ಕೆಜಿ ಲಡ್ಡು ಪ್ರಸಾದ ಎಷ್ಟು ಮೊತ್ತಕ್ಕೆ ಹರಾಜಾಯ್ತು ಗೊತ್ತಾ..?

ಹೀಗಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಮುರುಳಿ ದೂರು ದಾಖಲಿಸಿದ್ದಾರೆ. ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೊಟೇಲ್‌ಗೆ ಬಂದು ಪರಿಶೀಲಿಸಿದ್ದು, ಇಲ್ಲಿ ಇಲಿಗಳು ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಯಾಕಂದ್ರೆ ಇಲ್ಲಿ ಅಷ್ಟೊಂದು ಕ್ಲೀನ್ ಆಗಿಲ್ಲ ಮತ್ತು ಇಲಿ ಬರಲು ಅಲ್ಲಲ್ಲಿ ಹೋಲ್‌ಗಳಿದೆ ಎಂದು ಹೇಳಿದ್ದಾರೆ. ಅಲ್ಲದೇ, ಈ ಹೊಟೇಲ್‌ನಲ್ಲಿ ಬಳಸುವ ರಾ ಮೆಟಿರಿಯಲ್‌ಗಳ ಸ್ಯಾಪಂಲ್‌ಗಳನ್ನ ಪರೀಕ್ಷೆಗೆ ಕೊಂಡೊಯ್ದಿದ್ದಾರೆ.

- Advertisement -

Latest Posts

Don't Miss