Recipe: ರವಾ ಹಲ್ವಾ ರೆಸಿಪಿ (ರವಾ ಶಿರಾ, ಕೇಸರಿಬಾತ್)

Recipee: ಬೇಕಾಗುವ ಸಾಮಗ್ರಿ: 1 ಕಪ್ ರವಾ, 1 ಕಪ್ ಸಕ್ಕರೆ, 1 ಕಪ್ ತುಪ್ಪ, 3 ಸ್ಪೂನ್ ಹಾಲು, ಸ್ವಲ್ಪ ಬಾದಾಮ್, ಸ್ವಲ್ಪ ಕೇಸರ್, 4 ಕಪ್ ನೀರು.

ಮಾಡುವ ವಿಧಾನ: ಚಿಕ್ಕ ಬೌಲ್‌ನಲ್ಲಿ ಹಾಲು ಬಿಸಿ ಮಾಡಿ, ಅದಕ್ಕೆ ಕೇಸರ್ ಬೆರೆಸಿ, ಬದಿಗಿರಿಸಿ. ನಂತರ ಪ್ಯಾನ್ ಬಿಸಿ ಮಾಡಿ, ತುಪ್ಪ ಕಾಯಿಸಿ, ಅದಕ್ಕೆ ರವೆ ಹಾಕಿ, ಘಮ ಬರುವವರೆಗೂ ಹುರಿಯಿರಿ.

ರವಾ ಹುರಿದ ಬಳಿಕ ಅದಕ್ಕೆ ನೀರು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸಕ್ಕರೆ ಹಾಕಿ ಮತ್ತೆ ಮಿಕ್ಸ್ ಮಾಡಿ. ಮಿಶ್ರಣ ಸ್ವಲ್ಪ ಥಿಕ್ ಆದ ಬಳಿಕ, ಕೇಸರಿ ಹಾಲು ಹಾಕಿ ಮಿಕ್ಸ್ ಮಾಡಿ.

ಈಗ ನೀವು ಕೈಬಿಡದೇ ಮಿಶ್ರಣವನ್ನು ಮಿಕ್ಸ್ ಮಾಡುತ್ತಿರಬೇಕು. ಈ ಮಿಶ್ರಣ ಥಿಕ್ ಆಗುವವರೆಗೂ ನೀವು ಮಿಕ್ಸ್ ಮಾಡಬೇಕು. ಬಳಿಕ ಬಾದಾಮ್ ಸೇರಿಸಿದ್ರೆ, ರವಾ ಹಲ್ವಾ ರೆಡಿ.

About The Author