- Advertisement -
www.karnatakatv.net :ಅಕ್ಟೋಬರ್ ನಲ್ಲಿ ಆರಂಭವಾಗಲಿರೋ ಟಿ-20 ಟೂರ್ನಿಗೆ ಟೀಮ್ ಇಂಡಿಯಾ ಸಿದ್ಧವಾಗ್ತಿರೋ . ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಟೂರ್ನಿ ಮುಗಿದ ಮೇಲೆ ತಮ್ಮ ಸ್ಥಾನದಿಂದ ಕೆಳಗಳಿಯಲಿದ್ದಾರೆ.
ಹೌದು.. ನಾಯಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ 16 ಜನರ ತಂಡವನ್ನೂ ಘೋಷಣೆ ಮಾಡಲಾಗಿದ್ದು, ಈ ಮಹತ್ವದ ಟೂರ್ನಿ ಬಳಿಕ ರವಿಶಾಸ್ತ್ರಿ ಅವಧಿ ಮುಗಿಯುತ್ತದೆ. ಆದ್ರೆ ಈವರೆಗೂ ಒಪ್ಪಂದ ನವೀಕರಣಕ್ಕೆ ಮುಂದಾಗದ ರವಿಶಾಸ್ತ್ರಿ ಈಗಾಗಲೇ ತಮ್ಮ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಿದ್ದಾರೆ ಅಂತ ಹೇಳಲಾಗ್ತಿದೆ.
ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಶ್ರೀಧರ್ ವಿರಾಟ್ ಐಸಿಸಿ ಟಿ 20 ವಿಶ್ವಕಪ್ ನಂತರ ತಂಡದ ಉಸ್ತುವಾರಿ ವಹಿಸುವುದಿಲ್ಲ ಎಂದು ಅಭಿವೃದ್ಧಿಯ ಮೂಲಗಳು ತಿಳಿಸಿವೆ. ಹಾಗೆ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಈ ಹುದ್ದೆಯಲ್ಲಿ ಮುಂದುವರಿಯಬಹುದು ಎನ್ನಲಾಗಿದೆ.
- Advertisement -