Political News: ಮಹಿಳಾ ಅಧಿಕಾರಿಯಾದ ಶಾಲಿನಿ ರಜನೀಶ್ ಅವರನ್ನು ಎಮ್‌ಎಲ್‌ಸಿ ರವಿಕುಮಾರ್ ನಿಂದಿಸಿದ ಸುದ್ದಿ ತೀವ್ರ ಸದ್ದು ಮಾಡಿದೆ. ಬಿಜೆಪಿಯ ಈ ತಪ್ಪನ್ನೇ ಗಾಳವಾಗಿಸಿಕ“ಂಡಿರುವ ಕಾಂಗ್ರೆಸ್‌ಸಿಗರು ರವಿ ಕುಮಾರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದಾರೆ.
ಇದೀಗ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿದ್ದು, ರವಿಕುಮಾರ್ ಇರಬೇಕಾಗಿರುವುದು ಪರಿಷತ್ ನಲ್ಲಿ ಅಲ್ಲ, ನಿಮ್ಹಾನ್ಸ್ ನಲ್ಲಿ ಎಂದಿದ್ದಾರೆ.
ಬಿಜೆಪಿಯವರು ಕೇಳುವ ಕ್ಷಮೆಯು ಪಶ್ಚಾತಾಪದ ಕ್ಷಮೆಯಲ್ಲ, ಪಲಾಯನವಾದದ ಕ್ಷಮೆ ಎನ್ನುವುದನ್ನು ನಾನು ಹಿಂದೆಯೇ ಹೇಳಿದ್ದೆ, ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ನಾಲಿಗೆ ಹರಿಬಿಟ್ಟು ಕ್ಷಮೆ ಕೇಳಿದ್ದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ಈಗ ಮತ್ತೊಮ್ಮೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ತಮ್ಮ ಮಲಿನ ಮನಸಿನ ಕೊಳಕು ನಾಲಿಗೆ ಹರಿಬಿಟ್ಟಿದ್ದಾರೆ. ಮಹಿಳಾ ಅಧಿಕಾರಿಗಳನ್ನು ನಿಂದಿಸುವುದು ರವಿಕುಮಾರ್ ಅವರಿಗೆ ಚಟವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂಬುದು ನನ್ನ ಭಾವನೆ ಎಂದು ಪ್ರಿಯಾಂಕ್ ಬರೆದುಕ“ಂಡಿದ್ದಾರೆ.
ಮಾಡಿದ ತಪ್ಪನ್ನೇ ಪದೇ ಪದೇ ಮಾಡುವುದು, ಮತ್ತೆ ಮತ್ತೆ ಕ್ಷಮೆ ಕೇಳುವುದು ಬಿಜೆಪಿಯವರಿಗೆ ಸಾವರ್ಕರ್ ರಿಂದ ಬಂದ ರಕ್ತಗತ ಗುಣ ಇರಬಹುದು! ಮಹಿಳಾ ಅಧಿಕಾರಿಗಳನ್ನೇ ಈ ಪರಿ ನಿಂದಿಸುವ ಬಿಜೆಪಿಯವರು ಸಾಮಾನ್ಯ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬಹುದು? ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿರುವ ರವಿಕುಮಾರ್ ಅವರು ಘನತೆಯುಕ್ತ ಪರಿಷತ್ ನಲ್ಲಿ ಮುಂದುವರೆಯಲು ಅನರ್ಹರು. ರವಿಕುಮಾರ್ ಇರಬೇಕಾಗಿರುವುದು ಪರಿಷತ್ ನಲ್ಲಿ ಅಲ್ಲ, ನಿಮ್ಹಾನ್ಸ್ ನಲ್ಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ರವಿ ಕುಮಾರ್ ಹೇಳಿದ್ದೇನು..?
ರವಿ ಕುಮಾರ್ ಮಹಿಳಾ ಅಧಿಕಾರಿ ಶಾಲಿನಿ ರಜನೀಶ್ ಬಗ್ಗೆ ಮಾತನಾಡುವಾಗ, ಅವರು ರಾತ್ರಿಯಿಡೀ ರಾಜ್ಯ ಸರ್ಕಾರದ ಕೆಲಸ ಮಾಡ್ತಾರೆ, ಬೆಳಿಗ್ಗೆ ಸಿದ್ದರಾಮಯ್ಯನವರ ಕೆಲಸಾ ಮಾಡ್ತಾರೆ ಎಂದು ಡಬಲ್ ಮೀನಿಂಗ್ ಬರುವ ರೀತಿ ಹೇಳಿದ್ದರು. ಈ ಮಾತು ಕೇಳಿ, ಅಲ್ಲೇ ಇದ್ದ ಪೋಲೀಸ್ ಅಧಿಕಾರಿ ನಕ್ಕಿದ್ದರು. ಆದರೆ ರವಿ ಕುಮಾರ್ ಮಾತ್ರ ಈ ಹೇಳಿಕೆ ಬಗ್ಗೆ ಕ್ಷಮೆ ಕೇಳುವುದು ಬಿಟ್ಟು, ನಾನು ಮಹಿಳಾ ಅದಿಕಾರಿಗಳ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಲೇ ಇಲ್ಲ. ಅಂಥದ್ದೇನು ಹೇಳಲೇ ಇಲ್ಲವೆಂದೇ ಹೇಳಿದ್ದಾರೆ.