Sunday, April 13, 2025

Latest Posts

‘ಸಂಸದೆ ಸುಮಲತಾ ಒಬ್ಬರು ಅಪ್ರಬುದ್ಧ ರಾಜಕಾರಣಿ, ಅನಿರೀಕ್ಷಿತವಾಗಿ ಬಂದಂತಹ ಕೂಸು’

- Advertisement -

ಮಂಡ್ಯ : ಸಂಸದೆ ಸುಮಲತಾ ಒಬ್ಬರು ಅಪ್ರಬುದ್ಧ ರಾಜಕಾರಣಿ, ಅನಿರೀಕ್ಷಿತವಾಗಿ ಬಂದಂತಹ ಕೂಸು, ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ರವೀಂದ್ರ ಶ್ರೀಕಂಠಯ್ಯ, ಸುಮಲತಾ ಕೊಟ್ಟ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುಮಲತಾ, ಜೆಡಿಎಸ್ ಭದ್ರಕೋಟೆ ಛಿದ್ರವಾಗಿದೆ. ಕೋಟೆ ಒಡೆದುಹಾಕುವುದೊಂದೇ ಬಾಕಿ ಎಂದು ಸಂಸದೆ ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ರವೀಂದ್ರ ಶ್ರೀಕಂಠಯ್ಯ, ಸುಮಲತಾ ಅವರಿಗೆ ಮಂಡ್ಯ ಜಿಲ್ಲೆ ಏನು, ಜೆಡಿಎಸ್‌ನ ಹಿನ್ನೆಲೆ ಏನು ಗೊತ್ತಿಲ್ಲ. ಜೆಡಿಎಸ್ ಎಲ್ಲಿಂದ ಹುಟ್ಟಿಬಂದಿದೆ ಎಂಬುದನ್ನು ಯೋಚನೆ ಮಾಡುವ ಶಕ್ತಿ ಇಲ್ಲ. ಅವರು ರಾಜಕೀಯಕ್ಕೆ ಅನಿರೀಕ್ಷಿತವಾಗಿ ಬಂದಂತಹ ಕೂಸು. ಅವರಿಗೆ ಪಾಲಿಟಿಕ್ಸ್ ಗೊತ್ತಿಲ್ಲ ಎಂದು ರವೀಂದ್ರ ಶ್ರೀಕಂಠಯ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದರು.

ಅಂದು ಚುನಾವಣೆಗೆ ಸ್ಪರ್ಧಿಸಿದ್ದ ರಮ್ಯಾರನ್ನು ಪ್ರಣಾಳ ಶಿಶು ಎಂದು ಮಂಡ್ಯ ಶಾಸಕ ಎಂ. ಶ್ರೀನಿವಾಸ್ ಕರೆದಿದ್ದರು. ಇದೀಗ ಸಂಸದೆ ಸುಮಲತಾ ವಿರುದ್ಧ ಈ ಕೆಲಸವನ್ನು ರವೀಂದ್ರ ಶ್ರೀಕಂಠಯ್ಯ ಮಾಡಿದ್ದಾರೆ.

ಡಿಕೆಶಿ ಬಂಧನದ ವೇಳೆ ಆಸ್ತಿ ನಷ್ಟ.. ನಷ್ಟ ಆದವರು ಅರ್ಜಿ ಸಲ್ಲಿಸಲು ಅವಕಾಶ..

ರೇವಣ್ಣ ಆರೋಪಕ್ಕೆ ಬೇಸತ್ತು ವರ್ಗಾವಣೆ ಕೋರಿದ ಡಿವೈಎಸ್ಪಿ ..

ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಸಹಿಸಲ್ಲ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ..

- Advertisement -

Latest Posts

Don't Miss