Web News: ಪ್ರಸಿದ್ಧ ಯೂಟ್ಯೂಬರ್ ವಿಕಾಸ್ ಗೌಡ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಕ್ಸಸ್ ಜರ್ನಿ ಬಗ್ಗೆ ಮಾತನಾಡಿದ್ದಾರೆ.
ವಿಕಾಸ್ ಗೌಡ ಆಗಾಗ ವಿವಿಧ ರೀತಿಯ ಎಕ್ಸಪಿರಿಮೆಂಟ್ ವೀಡಿಯೋ ಮಾಡುತ್ತಿರುತ್ತಾರೆ. ಕೆಲವು ಬಾರಿ ಸೆಲೆಬ್ರಿಟಿಗಳ ಮನೆಗೆ ಹೋದ್ರೆ, ಕೆಲವು ಬಾರಿ ಮೆಜೆಸ್ಟಿಕ್‌ನಲ್ಲಿ ಪ್ರಯೋಗ ಮಾಡಲು ಹೋಗುವ ವೀಡಿಯೋಗಳನ್ನು ನೀವು ನೋಡಿರುತ್ತೀರಿ. ಇಂಥ ವೇಳೆ ಅವರು ಹುಷಾರಾಗಿ ಹಿಂದಿರುಗೋದೇ ಅವರಿಗೆ ಚಾಲೆಂಜ್ ಆಗಿರುತ್ತದೆ. ಆ ಬಗ್ಗೆ ವಿಕಾಸ್ ಗೌಡ ಮಾತನಾಡಿದ್ದಾರೆ.
ವಿಕಾಸ್ ಡಿಗ್ರಿ ಓದುವ ಸಮಯದಲ್ಲಿ ಮೆಜೆಸ್ಟಿಕ್‌ನಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆ ವೇಳೆ ವಿಕಾಸ್ ಗೌಡ ಮಂಗಳಮುಖಿಯರನ್ನು ನೋಡುತ್ತಿದ್ದರು. ಅವರು ಇತರರ ಜತೆ ಮಿಸ್ ಬಿಹೇವ್ ಮಾಡುತ್ತಿದ್ದನ್ನು ಕಾಣುತ್ತಿದ್ದ ವಿಕಾಸ್, ತಾವು ಯೂಟ್ಯೂಬರ್ ಆದ ಬಳಿಕ ಆ ಬಗ್ಗೆ ಪ್ರಯೋಗ ಮಾಡಲು ನಿರ್ಧರಿಸಿದರು. ಅಂಡರ್‌್ಪಾಸ್‌ನಲ್ಲಿ ವಿಕಾಸ್ ಹೋಗುವಾಗ, ಅಲ್ಲಿ ಅವರನ್ನು ಅಡ್ಡಗಟ್ಟಿದ ಮಂಗಳಮುಖಿಯರು, ಕೆಟ್ಟದಾಗಿ ಬೈದು, ಕ್ಯಾಮೆರಾ ಕಿತ್ತುಕ“ಳ್ಳುವ ಪ್ರಯತ್ನ ಮಾಡಿದರು.
ಅಲ್ಲದೇ, ವೀಡಿಯೋ ಡಿಲೀಟ್ ಮಾಡುವ ಪ್ರಯತ್ನವನ್ನೂ ಮಾಡಿದ್ದರು. ಬಳಿಕ ವಿಕಾಸ್ ನಂಬರ್ ಕೇಳಿ, ವಿಕಾಸ್ ತಪ್ಪು ತಪ್ಪಾಗಿ ನಂಬರ್ ನೀಡಿ, ಹೇಗೋ ತಪ್ಪಿಸಿಕ“ಂಡು ಬಂದರು. ಬಳಿಕ ವೀಡಿಯೋ ಅಪ್ಲೋಡ್ ಮಾಡಿದರು. ಕೆಲ ದಿನಗಳ ಕಾಲ ಯಾವುದೇ ರೆಸ್ಪಾನ್ಸ್ ಸಿಗದಿದ್ದರೂ, ಬಳಿಕ ಪೋಲೀಸರು ಸ್ಟರಿಕ್ಟ್ ಆ್ಯಕ್ಷನ್ ತೆಗೆದುಕ“ಂಡರು ಅಂತಾರೆ ವಿಕಾಸ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




