Political News: ಆರ್‌ಸಿಬಿ ಸತತ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ, ಪ್ಲೆ ಆಫ್‌ಗೆ ಲಗ್ಗೆ ಇಟ್ಟಿದೆ. ಈ ಕಾರಣಕ್ಕೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.
ಶಹಬ್ಬಾಶ್ ಹುಡುಗ್ರಾ! ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. ಕಪ್ ಗೆಲ್ಲುವ ಕನಸು ಜೀವಂತವಾಗಿದೆ. ಬದಲಾಗಿದೆ ಸಮಯ ಇದು RCBಯ ಹೊಸ ಅಧ್ಯಾಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಸತತ 6ನೇ ಗೆಲುವಿನೊಂದಿಗೆ ನಮ್ಮ ಆರ್‌ಸಿಬಿ ಪ್ಲೇಆಫ್ ಸುತ್ತಿಗೆ ಲಗ್ಗೆಯಿಟ್ಟಿದೆ.. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯದ ಪ್ರತಿ ಕ್ಷಣವನ್ನು ಆನಂದಿಸಿದೆ. #NammaRCB ತಂಡದ ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿಯಾದುದ್ದು ಖುಷಿಕೊಟ್ಟಿದೆ. ಇದು ಆರ್.ಸಿ.ಬಿ ಯ ಹೊಸ ಅಧ್ಯಾಯ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ವಿರಾಟ್ ಕೊಹ್ಲಿ, ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂದಿದ್ದರು. ಅಲ್ಲದೇ, ಈ ಬಾರಿ ಹೆಣ್ಣು ಮಕ್ಕಳ ಆರ್‌ಸಿಬಿ ಟೀಂ ಕಪ್ ಗೆದ್ದಿದ್ದು, ಇದು ಚಾಲೆಂಜಿಂಗ್ ಪಂದ್ಯವಾಗಿದೆ. ಆದರೆ ಸತತ ಸೋಲುಗಳನ್ನು ಕಂಡು ಇನ್ನೇನು ಆರ್‌ಸಿಬಿ ಮನೆಕಡೆ ಅನ್ನುವ ಪರಿಸ್ಥಿತಿ ಇತ್ತು. ಆದರೆ ಕಠಿಣ ಪರಿಶ್ರಮದ ಫಲವಾಗಿ ಆರ್‌ಸಿಬಿ 6 ಪಂದ್ಯಗಳಲ್ಲಿ ಗೆದ್ದು, ಪ್ಲೇ ಆಫ್‌ಗೆ ಕಾಲಿಟ್ಟಿದೆ. ಇನ್ನು ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದು ಫಿನಾಲೆಗೆ ಹೋಗಿ ಅಲ್ಲಿ ವಿನ್ ಆದ್ರೆ ಈ ಸಲ ಕಪ್ ನಮ್ದೇ.
ಶಹಬ್ಬಾಶ್ ಹುಡುಗ್ರಾ!
ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ.
ಕಪ್ ಗೆಲ್ಲುವ ಕನಸು ಜೀವಂತವಾಗಿದೆ.ಬದಲಾಗಿದೆ ಸಮಯ
ಇದು RCBಯ ಹೊಸ ಅಧ್ಯಾಯ.#RCBvsCSK #CongratulationsRCB pic.twitter.com/JiHcYWtnIu— DK Shivakumar (@DKShivakumar) May 18, 2024
ಸತತ 6ನೇ ಗೆಲುವಿನೊಂದಿಗೆ ನಮ್ಮ @RCBTweets ಪ್ಲೇಆಫ್ ಸುತ್ತಿಗೆ ಲಗ್ಗೆಯಿಟ್ಟಿದೆ..
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯದ ಪ್ರತಿ ಕ್ಷಣವನ್ನು ಆನಂದಿಸಿದೆ. #NammaRCB ತಂಡದ ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿಯಾದುದ್ದು ಖುಷಿಕೊಟ್ಟಿದೆ.
ಇದು ಆರ್.ಸಿ.ಬಿ ಯ ಹೊಸ ಅಧ್ಯಾಯ#EeSalaCupNamde pic.twitter.com/gv3GZQP8kC
— Siddaramaiah (@siddaramaiah) May 18, 2024