ಮುಂಬೈ: ಆರ್ಸಿಬಿ ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸವೆಲ್ ದಂಪತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಪಾರ್ಟಿ ನೀಡಿದೆ.
ಗ್ಲೆನ್ ಮ್ಯಾಕ್ಸ ವೆಲ್ ಗೆಳತಿ ವಿನಿ ರಾಮನ್ ಜೊತೆ ವಿವಾಹವಾಗಿ ಏ.27ಕ್ಕೆ ಒಂದು ತಿಂಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಟಗಾರರಿಗೆ ಪಾರ್ಟಿ ಹಮ್ಮಿಕೊಂಡಿತು. ಈ ಪಾರ್ಟಿಯಲ್ಲಿ ಆರ್ಸಿಬಿ ತಂಡದ ಎಲ್ಲಾ ಆಟಗಾರರು ಭಾಗವಹಿಸಿದ್ದರು.
ಪಾರ್ಟಿಯಲ್ಲಿ ವಿರಾಟ್ ಕೊಹ್ಲಿ ಅಲ್ಲೂ ಅರ್ಜುನ್ ನಟನೆಯ ಪುಷ್ಪಾ ಸಿನಿಮಾದ ಹಾಡಿಗೆ ಸಮಂತಾ ಡ್ಯಾನ್ಸ್ ಮಾಡಿರುಚ ಹುಂ ಅಂಟಾವ ಮಾವ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಸಖತ್ ವೈರಲ್ ಆಗಿದೆ.
ಇನ್ನು ಆರ್ಸಿಬಿ ಆಟಗಾರರು ಪಾರ್ಟಿಯಲ್ಲಿ ದೇಸಿ ಉಡುಗೆಗಳನ್ನು ತೊಟ್ಟು ಫೋಟೋಗೆ ಭರ್ಜರಿ ಫೋಸ್ ನೀಡಿದ್ದಾರೆ. ಈ ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್ಸಿಬಿ ಸ್ಪಿನ್ನರ್ ವನಿಂದು ಹಸರಂಗ ಹಸಿರು ಬಣ್ಣದ ಕುರ್ತಾದಲ್ಲಿ ಮಿಂಚಿದ್ದಾರೆ. ಇವರ ಜೊತೆ ರುದರ್ ಫೋರ್ಡ್ ಇದ್ದಾರೆ, ಇನ್ನು ಸ್ಟೈಲಿಶ್ ವಿರುಷ್ಕಾ ಜೋಡಿ ಫೋಟೋ ಹಂಚಿಕೊಂಡಿದ್ದಾರೆ.
ಆರ್ಸಿಬಿ ಈ ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 4ರಲ್ಲಿ ಸೋತು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶಿಸಬೇಕಿದಲ್ಲಿ ಮುಂಬರುವ ಎಲ್ಲಾ ಪಂದ್ಯಗಳನ್ನೂ ಆರ್ಸಿಬಿ ಗೆಲ್ಲಬೇಕಿದೆ.
ಕಳೆದ ಎರಡೂ ಪಂದ್ಯಗಳಿಂದ ಆರ್ಸಿಬಿ ಸಂಪೂರ್ಣವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸವೆಲ್ ಮತ್ತು ದಿನೇಶ್ ಕಾರ್ತಿಕ್ ರಂತಹ ಸ್ಟಾರ್ ಬ್ಯಾಟರ್ ಗಳಿದ್ದರೂ ತಂಡಕ್ಕೆ ಗೆಲುವು ಸಿಗುತ್ತಿಲ್ಲ.
ಶನಿವಾರ ಆರ್ ಸಿಬಿ ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.